OLA S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ AI ಸ್ಪೀಚ್ ರೆಕಗ್ನಿಷನ್‌ನಿಂದ ಆನ್‌ಬೋರ್ಡ್ ಸೆನ್ಸರ್‌ಗಳವರೆಗೆ ಡಿಜಿಟಲ್ ವೈಶಿಷ್ಟ್ಯಗಳು ಹೇಗಿದೆ ನೋಡಿ..!
ಓಲಾ ಎಲೆಕ್ಟ್ರಿಕ್ ಆಗಸ್ಟ್ 15 ರಂದು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್ 1 ಅನ್ನು 99,999 ರೂ.(ಎಕ್ಸ್ ಶೋರೂಂ) ದಿಂದ ಬೆಲೆ ಆರಂಭಿಸಿದೆ. ಓಲಾ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್ ಎರಡು ಟ್ರಿಮ್‌ಗಳಲ್ಲಿ ಬರುತ್ತದೆ - ಎಸ್ 1 ಮತ್ತು ಎಸ್ 1 ಪ್ರೊ - ಕ್ರಮವಾಗಿ 99,999 ಮತ್ತು 1,29,999 ರೂ. ಕಂಪನಿಯು ಅಧಿಕೃತವಾಗಿ ಓಲಾ ಎಸ್ 1 ಅನ್ನು ಸೆಪ್ಟೆಂಬರ್ 8 ರಿಂದ ಖರೀದಿಸಲು ತೆರೆಯುತ್ತದೆ ಮತ್ತು ಅಕ್ಟೋಬರ್‌ನಲ್ಲಿ 1,000 ನಗರಗಳು ಮತ್ತು ಪಟ್ಟಣಗಳಲ್ಲಿ ವಿತರಣೆಯನ್ನು ಪ್ರಾರಂಭಿಸಲಿದೆ. ಸೆಪ್ಟೆಂಬರ್ 8 ರವರೆಗೆ, ಕಂಪನಿಯು 499 ರೂ.ಗೆ ಬುಕಿಂಗ್ ಸ್ವೀಕರಿಸುತ್ತದೆ ಪೋರ್ಟಬಲ್ ಚಾರ್ಜರ್ ನಿಂದ ಸುಮಾರು ಆರು ಗಂಟೆಗಳ ಕಾಲ ಸ್ಕೂಟರ್ ನಡೆಯಲಿದೆ ಮತ್ತು ಪೋರ್ಟಬಲ್ ಚಾರ್ಜರ್ ಅನ್ನು ನಿಮ್ಮ ಮನೆಗಳಲ್ಲಿ ಕೂಡ ಲವಡಿಸಿಕೊಳ್ಳಬಹುದು. ಸ್ಕೂಟರ್ ರಿವರ್ಸ್ ಮೋಡ್, ಹಿಲ್ ಹೋಲ್ಡ್ ಫಂಕ್ಷನ್, ಡ್ರೈವಿಂಗ್ ಮೋಡ್ಸ್ ಮತ್ತು ಕ್ರೂಸ್ ಕಂಟ್ರೋಲ್ ನಂತಹ ವಿವಿಧ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು ಗಂಟೆಗೆ 0-40 ಕಿಮೀ ಒಡಲು 3 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ನೀವು ಸಮೀಪಿಸುತ್ತಿದ್ದಂತೆ ಅನ್‌ಲಾಕ್ ಆಗಲು ಮತ್ತು ನೀವು ಹೊರಡುವಾಗ ಲಾಕ್ ಮಾಡಲು ನಿಮ್ಮ ಫೋನ್ ನಿಂದ ಸ್ಮಾರ್ಟ್ ಆನ್‌ಬೋರ್ಡ್ ಸೆನ್ಸರ್‌ಗಳು ಕೂಡ ಅಳವಡಿಸಲಾಗಿದೆ.
ಲುಕ್ ಫೀಲ್ ಮತ್ತು ಎಸ್ 1 ನ ವಾಯ್ಸ್ ಸಪೋರ್ಟ್ ರೈಡ್ ಅನುಭವವನ್ನು ಆಮೂಲಾಗ್ರವಾಗಿ ಬದಲಾಯಿಸಲಾಗಿದೆ. ನಿಮಗೆ ಬೇಕಾದ ವೈಗೆಟ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.
ಮಿಲ್ಟಿ ಮೈಕ್ರೊಫೋನ್ ಅರೇ ಮತ್ತು ಮನೆಯಲ್ಲಿ ನಿರ್ಮಿಸಲಾದ ಐ ಸ್ಪೀಚ್ ರೆಕಗ್ನಿಷನ್ ಅಲ್ಗಾರಿದಮ್‌ಗಳು ನಿಮ್ಮ ಓಲಾ ಎಸ್ 1 ಅನ್ನು ನಿಯಂತ್ರಿಸಲು 'ಹೇ ಓಲಾ' ಎಂದು ಹೇಳುವ ವಾಯ್ಸ್ ಕಂಟ್ರೋಲ್ ಕೂಡ ಹೊಂದಿದೆ.
ತಡೆರಹಿತ ಸಂಚರಣೆ, ನಿಮ್ಮ ಸ್ಕೂಟರ್‌ಗೆ ಲೋಕ್ಸಷನ್ ಶೇರ್ ಮತ್ತು ಚಾರ್ಜ್ ಪಾಯಿಂಟ್ ಟಿಪ್ಸ್ ಸಲಹೆಗಳನ್ನು ಡಿಜಿಟಲ್ ಸ್ಕ್ರೀನ್ ನಲ್ಲಿ ತೋರಿಸುತ್ತದೆ.
ರೇಡ್ ಮಾಡುವ ಮೊದಲು, ಅಥವಾ ನಿಮ್ಮ ಸ್ಟಾಪ್ ತಲುಪಿದ ನಂತರ, ನಿಮ್ಮ ಸ್ಕೂಟರ್ ಅನ್ನು ನಿಮ್ಮ ಫೋನ್ ಮೂಲಕ ನಿಯಂತ್ರಿಸಬಹುದು.