ಮನೆಯಲ್ಲಿ ರಾಶಿರಾಶಿ ಹಳೆಯ ಸೀರೆ-ಬಟ್ಟೆಗಳಿದ್ಯಾ? ಹಾಗಾದ್ರೆ ಈ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಿ ಸಾವಿರ ಸಾವಿರ ರೂಪಾಯಿ ಪಡೆಯಿರಿ! ಬಟ್ಟೆ ಮಾರುವ ಸೈಟ್ ಇಲ್ಲಿದೆ
ಎಲ್ಲರ ಮನೆಯಲ್ಲೂ ಬಳಸದೆ ಇರುವ ರಾಶಿ ರಾಶಿ ಬಟ್ಟೆಗಳಿದ್ದೇ ಇರುತ್ತದೆ. ಅವುಗಳನ್ನು ಏನು ಮಾಡಬೇಕೆಂಬುದೇ ತೋಚದೆ, ಕೆಲವರು ಬಡಜನರಿಗೆ ದಾನವೆಂದು ನೀಡಿದರೆ ಇನ್ನೂ ಕೆಲವರು ಗಂಟುಕಟ್ಟಿ ಅಟ್ಟಕ್ಕೋ ಅಥವಾ ಯಾವುದೋ ಒಂದು ಕೋಣೆಯಲ್ಲಿ ಎಸೆದಿರುತ್ತಾರೆ. ಆದರೆ ಹಾಗೆಲ್ಲಾ ಮಾಡುವುದಕ್ಕಿಂತ ಕೆಲ ಆಪ್‌ಗಳ ಮುಖಾಂತರ ಹಳೆ ಬಟ್ಟೆಗಳನ್ನು ಮಾರಾಟ ಮಾಡಿದ್ರೆ ಕೈತುಂಬಾ ಹಣ ಗಳಿಸಬಹುದು.
ಅಷ್ಟಕ್ಕೂ ಅಂತಹ ಆಪ್‌ಗಳು ಯಾವುವು? ಹೇಗೆ ಮಾರಾಟ ಮಾಡುವುದು? ಎಂಬುದರ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
GlowRoad: Resell and Earn Online: ಇದು ಅಮೆಜಾನ್ ಅವರ ಆಪ್ ಆಗಿದ್ದು, ಇಲ್ಲಿ ಹಳೆಯ ಬಟ್ಟೆಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡಬಹುದು. ಈ ಸೈಟ್‌ನಲ್ಲಿ ನೀವು ಬಟ್ಟೆ ಖರೀದಿದಾರರೊಂದಿಗೆ ಸುಲಭವಾಗಿ ಮಾತನಾಡಬಹುದು. ಜೊತೆಗೆ ಹಳೆಯ ಬಟ್ಟೆಗಳಿಗೆ ಉತ್ತಮ ಬೆಲೆಯೂ ದೊರೆಯುತ್ತವೆ. ಮಾರಾಟದ ಹೊರತಾಗಿ, ನೀವು ಈ ಸೈಟ್‌ನಿಂದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಸಹ ಖರೀದಿಸಬಹುದು.
OLX: OLX ಬಗ್ಗೆ ನಿಮಗೆ ಈಗಾಗಲೇ ತಿಳಿದಿರುತ್ತದೆ. ಹಳೆಯ ಬಟ್ಟೆಗಳನ್ನು ಹೊರತುಪಡಿಸಿ, OLX ನಲ್ಲಿ ಅನೇಕ ವಸ್ತುಗಳನ್ನು ಸಹ ಮಾರಾಟ ಮಾಡಬಹುದು. ಮಾರಾಟದ ಹೊರತಾಗಿ ಈ ಸೈಟ್‌ನಿಂದ ಬಟ್ಟೆಗಳನ್ನು ಸಹ ಖರೀದಿಸಬಹುದು, ಆದರೆ OLX ನಲ್ಲಿ ಸ್ವಲ್ಪ ಎಚ್ಚರದಿಂದಿರಬೇಕು, ಏಕೆಂದರೆ ಜನರು ಈ ಆಪ್ ಮೂಲಕ ಮೋಸ ಹೋಗಿರುವ ಅನೇಕ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬರುತ್ತಿದೆ.
Ragman: ಇದು ಕೂಡ ಹಳೆಯ ಬಟ್ಟೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಬಳಸಬಹುದಾದ ಆನ್‌ಲೈನ್ ಸೈಟ್ ಆಗಿದೆ. ಹಳೆಯ ಬಟ್ಟೆಗಳು ಮಾತ್ರವಲ್ಲದೆ, ವಸ್ತುಗಳನ್ನು ಸಹ ಇಲ್ಲಿ ಮಾರಾಟ ಮಾಡಬಹುದು.
Berry: ಈ ಸೈಟ್‌ನಲ್ಲಿ ಸೌಂದರ್ಯ ಮತ್ತು ಇತರ ಉತ್ಪನ್ನಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ವೆಬ್‌ಸೈಟ್ ಸಹ ಅಪ್ಲಿಕೇಶನ್ ಅನ್ನು ಹೊಂದಿದ್ದು, ಅದರ ಸಹಾಯದಿಂದ ಸೀರೆ ಅಥವಾ ಇತರ ವಸ್ತುಗಳನ್ನು ಮಾರಾಟ ಮಾಡಿ ಕೈತುಂಬಾ ದುಡ್ಡು ಪಡೆಯಬಹುದು.
ಸೂಚನೆ: ಈ ಸುದ್ದಿಯ ನಿಖರತೆ ಮತ್ತು ಜವಾಬ್ದಾರಿಯನ್ನು ಜೀ ಕನ್ನಡ ನ್ಯೂಸ್ ವಹಿಸಿಕೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಸುದ್ದಿ ಅನುಸಾರ ಮಾಹಿತಿ ನೀಡಲಾಗುತ್ತದೆ.