ಒಂದೇ ವಾರದಲ್ಲಿ ಬೊಕ್ಕ ತಲೆಯಲ್ಲೂ ದಷ್ಟಪುಷ್ಟ ಕಡುಕಪ್ಪು ಕೂದಲು ಬೆಳೆಯುವಂತೆ ಮಾಡುತ್ತೆ ಈ ʼಎಣ್ಣೆʼ

Sat, 02 Nov 2024-8:28 am,

ಇತ್ತೀಚಿನ ದಿನಗಳಲ್ಲಿ, ತಪ್ಪು ಆಹಾರ ಪದ್ಧತಿಯಿಂದ ಕೂದಲಿನ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ. ಕೂದಲು ಉದುರುವುದು, ತಲೆ ಹೊಟ್ಟು ಮತ್ತು ಬಿಳಿಯಾಗುವುದು ಜನರಿಗೆ ಬಹಳಷ್ಟು ತೊಂದರೆ ನೀಡುತ್ತದೆ. ಅದರಲ್ಲೂ ಯುವಕರು ಈ ಸಮಸ್ಯೆಯಿಂದ ತುಂಬಾ ತೊಂದರೆಗೀಡಾಗಿದ್ದಾರೆ.

 

ಅನೇಕ ಜನರು ವಿವಿಧ ತೈಲಗಳು ಮತ್ತು ಮನೆಮದ್ದುಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಹೀಗಿರುವಾಗ ಕೆಲವೊಂದು ಎಣ್ಣೆಗಳನ್ನು ಪ್ರಯತ್ನಿಸಬಹುದು. ಅದರಲ್ಲಿ ಒಂದು ಆಲಿವ್ ಎಣ್ಣೆ. ಆಲಿವ್ ಎಣ್ಣೆಯು ಕೂದಲಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

 

ಆಲಿವ್ ಎಣ್ಣೆಯನ್ನು ಕೂದಲಿಗೆ ಹಚ್ಚುವುದು ತುಂಬಾ ಪ್ರಯೋಜನಕಾರಿ. ಇದು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲಿನಿಂದ ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ

 

ತಲೆಹೊಟ್ಟು ದೊಡ್ಡ ಕೂದಲಿನ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಇದು ಜನರನ್ನು ಕಾಡುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಆಲಿವ್ ಎಣ್ಣೆಯನ್ನು ಬಳಸಬಹುದು. ಕೂದಲನ್ನು ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ ನಂತರ ಬಾಚಣಿಗೆಯಿಂದ ಕೂದಲನ್ನು ಸರಿಯಾಗಿ ಬಾಚಿಕೊಂಡರೆ, ತಲೆಹೊಟ್ಟು ಸಮಸ್ಯೆಯಿಂದ ಸಾಕಷ್ಟು ಪರಿಹಾರವನ್ನು ಪಡೆಯಬಹುದು.

 

ಕೂದಲು ಉದುರುವುದನ್ನು ತಡೆಯುವಲ್ಲಿ ಆಲಿವ್ ಎಣ್ಣೆಯನ್ನು ಅತ್ಯಂತ ಪರಿಣಾಮಕಾರಿ. ಆಲಿವ್ ಎಣ್ಣೆಯು ಸಾಕಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ನಿಮ್ಮ ಕೂದಲನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ನೆತ್ತಿಗೆ ಪೋಷಣೆಯನ್ನು ಒದಗಿಸುವ ಮೂಲಕ ಸರಿಯಾದ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

 

ಕೂದಲಿಗೆ ಹಾನಿಯು ನೆತ್ತಿಗೆ ಹಾನಿ ಮಾಡುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ಆಲಿವ್ ಎಣ್ಣೆ ಬಹಳ ಮುಖ್ಯ. ಆಲಿವ್ ಎಣ್ಣೆಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿವೆ, ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಕೂದಲನ್ನು ರಕ್ಷಿಸಲು ಸಹಾಯ ಮಾಡುತ್ತದೆ.

 

ಕೂದಲಿಗೆ ಪೋಷಣೆ ಮತ್ತು ಆರ್ಧ್ರಕಗೊಳಿಸಲು ಆಲಿವ್ ಎಣ್ಣೆ ಬಹಳ ಮುಖ್ಯ. ಒಣ ಕೂದಲು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ ಆಲಿವ್ ಎಣ್ಣೆಯು ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುತ್ತದೆ ಮತ್ತು ತೇವಾಂಶವನ್ನು ನೀಡುತ್ತದೆ. ಈ ಎಣ್ಣೆಯನ್ನು ಬಾಳೆಹಣ್ಣಿನೊಂದಿಗೆ ಬೆರೆಸಿ ಬಳಸಬಹುದು.

 

 ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE MEDIA ಈ ಮಾಹಿತಿಗೆ ಜವಾಬ್ದಾರನಾಗಿರುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link