ಖಾಸಗಿ ವಾಹಿನಿಯಲ್ಲಿ ಸೆಕ್ಯೂರಿಟಿ ಆಗಿ ಕೆಲ್ಸ ಮಾಡ್ತಿದ್ದ ಈತ ಇಂದು ಕನ್ನಡದ ಜನಪ್ರಿಯ ನಟ! ಬಿಗ್ ಬಾಸ್ ವಿನ್ನರ್ ಕೂಡ ಹೌದು... ಯಾರೆಂದು ಗೆಸ್ ಮಾಡಿ ನೋಡೋಣ
ಕರುನಾಡಲ್ಲಿ ಅದೆಷ್ಟೋ ಸೆಲೆಬ್ರಿಟಿಗಳಿದ್ದಾರೆ. ಈ ಎಲ್ಲರೂ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿರೋದು ತಮ್ಮ ಶ್ರಮ ಮತ್ತು ವಿಶೇಷ ಸಾಧನೆಯಿಂದ.
ಒಂದು ಕಾಲದಲ್ಲಿ ಕಷ್ಟಪಟ್ಟು ದುಡಿದ ಇವರೆಲ್ಲಾ ಸಿನಿರಂಗದಲ್ಲಿ ಸೆಲೆಬ್ರಿಟಿಗಳಾಗಿ ಮಿಂಚಿದ್ದಾರೆ... ಮಿಂಚುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಣ್ಣಾವ್ರು, ವಿಷ್ಣು ದಾದ, ಅಂಬರೀಷ್ ಸೇರಿದಂತೆ ಅನೇಕರು ಇದ್ದಾರೆ.
ಅಂದಹಾಗೆ ನಾವಿಂದು ಓರ್ವ ನಟನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ನಟ ಖಾಸಗಿ ವಾಹಿನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಆ ಬಳಿಕ ತನ್ನ ಸಾಮಾರ್ಥ್ಯ, ಸಾಧನೆ, ಪ್ರತಿಭೆಯಿಂದ ಇದೀಗ ಕನ್ನಡದ ಪ್ರಮುಖ ನಟನಾಗಿ ಸದ್ದು ಮಾಡುತ್ತಿದ್ದಾರೆ.
ಆ ನಟ ಬೇರಾರು ಅಲ್ಲ, ಒಳ್ಳೆ ಹುಡುಗ ಪ್ರಥಮ್. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಸವಿರುಚಿʼ ಅಡುಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಥಮ್ ಹಿನ್ನೆಲೆ ಬಗ್ಗೆ ನಿರೂಪಕಿ ಹೇಳಿಕೆ ನೀಡಿದ್ದರು.
ಇನ್ನು ಪ್ರಥಮ್ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 4ರ ವಿಜೇತರು ಕೂಡ ಹೌಡು. ಇನ್ನು ಸಿನಿಮಾಗಳಲ್ಲೂ ನಟಿಸಿರುವ ಇವರು ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದಾರೆ.
ಪ್ರಥಮ್, ಫೆಬ್ರವರಿ 24 ರಂದು ಕೊಳ್ಳೇಗಾಲ ತಾಲೂಕಿನ ಹಲಗಾಪುರದಲ್ಲಿ ಜನಿಸಿದರು. ಇವರ ತಂದೆ ಮಲ್ಲೇ ಗೌಡ ಮತ್ತು ತಾಯಿ ಲಕ್ಷ್ಮಿ. ಮೈಸೂರು ಮತ್ತು ತಿ.ನರಸೀಪುರದಲ್ಲಿ ಶಿಕ್ಷಣ ಪಡೆದಿದ್ದಾರೆ.