Bollywood Actress: ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿಯರು
ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. 2022ರ ಏಪ್ರಿಲ್ ತಿಂಗಳಿನಲ್ಲಿ ಆಲಿಯಾ, ರಣಬೀರ್ ಕಪೂರ್ ಜೊತೆಗೆ ವಿವಾಹವಾದರು. ನವೆಂಬರ್ ತಿಂಗಳಿನಲ್ಲಿ ಆಲಿಯಾ ಹೆಣ್ಣು ಮಗುವಿಗೆ ತಾಯಿಯಾದರು.
ಬಾಲಿವುಡ್ ಖ್ಯಾತ ನಟಿ ಶ್ರೀದೇವಿ 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಮದುವೆಯಾದ ಕೆಲವೇ ತಿಂಗಳ ಬಳಿಕ ಶ್ರೀದೇವಿ ಜಾಹ್ನವಿ ಕಪೂರ್ ಗೆ ಜನ್ಮ ನೀಡಿದರು.
ಬಾಲಿವುಡ್ ನಟಿ ಕೊಂಕಣ ಸೇನ್ ಶರ್ಮಾ 2007ರಲ್ಲಿ ರಣವೀರ್ ಶೋರೆಯನ್ನು ವಿವಾಹವಾದರು. ಮದುವೆಯಾದ 6 ತಿಂಗಳ ಬಳಿಕ ಅವರು ಪುತ್ರ ಹರೂನ್‍ಗೆ ಜನ್ಮ ನೀಡಿದರು.
ಹಿರಿಯ ನಟಿ ಸಾರಿಕಾ ಅವರು ಖ್ಯಾತ ನಟ ಕಮಲ್ ಹಾಸನ್ ಜೊತೆಗೆ Live-in Relationshipsನಲ್ಲಿದ್ದರು. ಈ ವೇಳೆಯೇ ಅವರು ಪುತ್ರಿ ಶ್ರುತಿ ಹಾಸನ್‍ಗೆ ಜನ್ಮ ನೀಡಿದ್ದರು.
ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಅವರು ಅನುರಾಗ್ ಕಶ್ಯಪ್ ಜೊತೆಗೆ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅವರು ಹರ್ಷಬರ್ಗ್ ಜೊತೆಗೆ Live-in Relationshipsನಲ್ಲಿದ್ದರು. ಈ ವೇಳೆ ಅವರು ಪುತ್ರಿ ಸಫೂಗೆ ಜನ್ಮ ನೀಡಿದರು.