OMG! TB ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದೆ ಮಹಿಳೆಯ ಶ್ವಾಸಕೋಶದಲ್ಲಿ ಸಿಕ್ಕಿದ್ದೇನು ಗೊತ್ತಾ?

Sat, 03 Apr 2021-9:10 am,

ಇತ್ತೀಚಿನ ವರದಿಯ ಪ್ರಕಾರ, ಶಾಲೆಯಲ್ಲಿ ಪಾಠ ಕಲಿಸುವ 27 ವರ್ಷದ ಮಹಿಳಾ ಶಿಕ್ಷಕಿಗೆ ಎದೆ ನೋವು ಕಾಣಿಸುತ್ತಿತ್ತು. ಅವರು ಕಳೆದ ಆರು ತಿಂಗಳಿನಿಂದ ಕೆಮ್ಮು ಮತ್ತು ಜ್ವರದಂತಹ ರೋಗಲಕ್ಷಣಗಳಿಂದ ಬಳಲುತ್ತಿದ್ದರು. ಬಳಿಕ ಆಕೆಗೆ ನನಗೆ ಟಿಬಿ ಕಾಯಿಲೆ ಇರಬಹುದೇನೋ ಎಂಬ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಅವರು ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿದರು. ಬಳಿಕ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತು.  ಆದರೆ ಎಲ್ಲಾ ಪರೀಕ್ಷೆಗಳ ವರದಿ ನಕಾರಾತ್ಮಕವಾಗಿ ಕಂಡು ಬಂದಿದೆ. ಅದಾಗ್ಯೂ ಮಹಿಳೆಗೆ ಎದೆನೋವು ಕಡಿಮೆಯಾಗಿರಲಿಲ್ಲ.

ಕೊನೆಯಲ್ಲಿ, ವೈದ್ಯರು ಮಹಿಳೆಯ ಶ್ವಾಸಕೋಶವನ್ನು ಎಕ್ಸರೆ ಮಾಡಿದರು. ಕ್ಷ-ಕಿರಣಗಳನ್ನು ಮಾಡುವ ವೈದ್ಯರು ಶ್ವಾಸಕೋಶದ ಮೇಲಿನ ಬಲಭಾಗದಲ್ಲಿ ಊತ ಇರುವುದು ಪತ್ತೆಯಾಯಿತು. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಊತವು ಶ್ವಾಸಕೋಶದಲ್ಲಿ ತಲೆಕೆಳಗಾದ ಚೀಲದಂತಹ ರಚನೆಯಿಂದ ಉಂಟಾಗಿದೆ ಎಂದು ಕಂಡುಬಂದಿದೆ. ಈ ಚೀಲದಿಂದಾಗಿ, ಮಹಿಳೆಗೆ ನಿರಂತರ ಜ್ವರ ಮತ್ತು ಕೆಮ್ಮು ಬರುತ್ತಿತ್ತು ಎಂದು ಹೇಳಲಾಗಿದೆ.

ಇದರ ನಂತರ, ವೈದ್ಯರು ತಕ್ಷಣ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು ಮತ್ತು ಶಸ್ತ್ರಚಿಕಿತ್ಸೆಯ ನಂತರ ಶ್ವಾಸಕೋಶದಲ್ಲಿದ್ದ ಆ ಚೀಲವನ್ನು ನೋಡಿ ವೈದ್ಯರು ಆಶ್ಚರ್ಯಚಕಿತರಾದರು. ವಾಸ್ತವವಾಗಿ ಇದು ಕಾಂಡೋಮ್ (Condom) ಆಗಿತ್ತು. ವೈದ್ಯರು ಮಹಿಳೆ ಮತ್ತು ಪತಿಯನ್ನು ಮುಖಾಮುಖಿಯಾಗಿ ವಿಚಾರಿಸಿದಾಗ, ಬ್ಲೋಜೋಬ್ಸ್ ಸಮಯದಲ್ಲಿ ತಾನು ಕಾಂಡೋಮ್ ನುಂಗಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ದೇಹಕ್ಕೆ ಹೋದ ನಂತರ ಕಾಂಡೋಮ್ ಸಡಿಲಗೊಂಡಿದೆ ಎಂದು ದಂಪತಿಗಳು ಹೇಳಿದ್ದಾರೆ. 

ಇದನ್ನೂ ಓದಿ - Lockdownನಲ್ಲಿ ಕಾಂಡೊಮ್-ರೋಲಿಂಗ್ ಪೇಪರ್ ಗಳಿಗೆ ಹೆಚ್ಚಾದ ಬೇಡಿಕೆ... ವಿಶೇಷತೆ ಏನು ಗೊತ್ತಾ?

ಈ ಕಾಂಡೋಮ್ ಬಗ್ಗೆ ತನಗೂ ತನ್ನ ಪತಿಗೂ ತಿಳಿದಿದೆ ಎಂದು ಮಹಿಳೆ ಹೇಳಿದ್ದಾರೆ. ಆದರೆ ಮುಜುಗರದಿಂದಾಗಿ ವೈದ್ಯರ ಬಳಿ ಈ ಬಗ್ಗೆ ಹೇಳಲಿಲ್ಲ. ಆದಾಗ್ಯೂ, ಎಕ್ಸರೆ ಸಮಯದಲ್ಲಿ, ವೈದ್ಯರು ಈ ಬಗ್ಗೆ ತಿಳಿದುಕೊಂಡರು ಮತ್ತು ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಿದ್ದರಿಂದ ಮಹಿಳೆಯ ಜೀವವನ್ನು ಉಳಿಸಲಾಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ - ಎಚ್ಚರ! ಕರೋನಾ ಯುಗದಲ್ಲಿ ಅಪ್ಪಿ-ತಪ್ಪಿಯೂ ಶಸ್ತ್ರಚಿಕಿತ್ಸೆಗೆ ಒಳಗಾಗದಿರಿ

ವರದಿಯ ಪ್ರಕಾರ, ಇದು ವೈದ್ಯಕೀಯ ಸಾಹಿತ್ಯದಲ್ಲಿ ಈ ರೀತಿಯ ವಿಶಿಷ್ಟ ಪ್ರಕರಣವಾಗಿದೆ. ಇದೀಗ ಮಹಿಳೆಯ ಸ್ಥಿತಿ ಉತ್ತಮವಾಗಿದೆ ಮತ್ತು ಅವಳು ದಿನನಿತ್ಯದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾಳೆ. ಆದಾಗ್ಯೂ, ಕಾಂಡೋಮ್ನ ಉಳಿದ ಭಾಗಗಳನ್ನು ತೆಗೆದುಹಾಕಲು ಅವರು ಮತ್ತೊಂದು ಬ್ರಾಂಕೋಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎನ್ನಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link