Independence Day: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯ ಪಗಡಿಯ ಝಲಕ್ ಇಲ್ಲಿದೆ
ಇಂದು ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಬಣ್ಣವನ್ನು ಹಿಂದಿದ್ದ ಪೇಟವನ್ನು ಧರಿಸಿದ್ದರು. ಇದರೊಂದಿಗೆ ಪ್ರಧಾನಿ ಮೋದಿ ಬಿಳಿ ಬಣ್ಣದ ಕುರ್ತಾ ಮತ್ತು ಬೂದು ಬಣ್ಣದ ಜಾಕೆಟ್ ಕೂಡಾ ಧರಿಸಿದ್ದರು. ಪ್ರಧಾನಿಯವರ ಜಾಕೆಟ್ ಮೇಲೆ ತ್ರಿವರ್ಣ ಧ್ವಜದ ಬ್ಯಾಜ್ ಕೂಡ ಹಾಕಲಾಗಿತ್ತು.
2021 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಬಣ್ಣದ ಪಗಡಿ ಧರಿಸಿದ್ದರು. ಇದು ತುಂಬಾ ಆಕರ್ಷಕವಾಗಿತ್ತು. ಇದರೊಂದಿಗೆ ಪ್ರಧಾನಿ ಮೋದಿ ಅವರು ತಿಳಿ ಆಕಾಶ ನೀಲಿ ಬಣ್ಣದ ಜಾಕೆಟ್ ಮತ್ತು ಬಿಳಿ ಬಣ್ಣದ ಕುರ್ತಾ-ಪೈಜಾಮಾ ಧರಿಸಿದ್ದರು.
2020 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಮತ್ತು ಕೆನೆ ಬಣ್ಣದ ಪೇಟವನ್ನು ಧರಿಸಿದ್ದರು. ಇದರೊಂದಿಗೆ ಪ್ರಧಾನಿ ಅರ್ಧ ತೋಳಿನ ಕುರ್ತಾ ಧರಿಸಿದ್ದರು. ಇದಲ್ಲದೆ, ಪ್ರಧಾನಿ ಮೋದಿ ತಮ್ಮ ಕುತ್ತಿಗೆಗೆ ಕೇಸರಿ ಬಣ್ಣದ ಬದು ಹೊಂದಿದದ್ದಂತಹ ಬಿಳಿ ಬಣ್ಣದ ಶಾಲು ಧರಿಸಿದ್ದರು.
2019 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿರುವ ಪೇಟವು ತುಂಬಾ ವಿಶಿಷ್ಟವಾಗಿತ್ತು. ಪ್ರಧಾನಿ ಮೋದಿಯವರ ಈ ಪೇಟ ಕೆಂಪು, ಹಸಿರು ಮತ್ತು ಹಳದಿ ಬಣ್ಣಗಳನ್ನು ಹೊಂದಿತ್ತು. ಇದರೊಂದಿಗೆ ಅರ್ಧ ತೋಳಿನ ಕುರ್ತಾ ಮತ್ತು ಪೈಜಾಮ ಧರಿಸಿದ್ದರು. ಪ್ರಧಾನಿ ಕೊರಳಿಗೆ ಕೇಸರಿ ಶಾಲು ಹಾಕಿದ್ದರು.
2018 ರಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಮತ್ತು ಕೆಂಪು ಪೇಟವನ್ನು ಧರಿಸಿದ್ದರು. ಇದರೊಂದಿಗೆ ಪ್ರಧಾನಿ ಮೋದಿ ಬಿಳಿ ಬಣ್ಣದ ಫುಲ್ ಸ್ಲೀವ್ ಕುರ್ತಾ ಮತ್ತು ಪೈಜಾಮ ಧರಿಸಿದ್ದರು.