Venus Transit: 2023: ಈ ದಿನ ಮಂಗಳನ ಅಂಗಳಕ್ಕೆ ಶುಕ್ರನ ಎಂಟ್ರಿ, 5 ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

Fri, 03 Mar 2023-9:36 pm,

1. ಮೇಷ: ಶುಕ್ರ ಮೇಷ ರಾಶಿಯನ್ನು ಪ್ರವೆಶಿಸಲಿದ್ದಾನೆ. ಇದರಿಂದ ಮೇಷ ರಾಶಿಯ ಜನರಿಗೆ ಸಾಕಷ್ಟು ಲಾಭ ಸಿಗಲಿದೆ. ನಿಮ್ಮ ಪರ್ಸ್ನ್ಯಾಲಿಟಿಯಲ್ಲಿ ಬದಲಾವಣೆ ಕಂಡುಬರಲಿದೆ. ಬಂಧು-ಮಿತ್ರರಿಂದ ನಿಮಗೆ ಸಾಕಷ್ಟು ಬೆಂಬಲ ಸಿಗಲಿದೆ. ಪ್ರೇಮ ಸಂಬಂಧ ಕೂಡ ಗಟ್ಟಿಯಾಗಲಿದೆ. ವಿವಾಹಿತರಿಗೆ ಸಂಗಾತಿಯ ಭರಪೂರ ಸಾಥ್ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಹಲವು ಆರ್ಥಿಕ ಲಾಭಗಳು ಸಿಗಲಿವೆ. ಬಿಸ್ನೆಸ್ ನಲ್ಲಿಯೂ ಕೂಡ ನಿಮಗೆ ಲಾಭದ ಸಂಕೇತಗಳಿವೆ.  

2. ಮಿಥುನ: ಶುಕ್ರ ಗೋಚರ ಮಿಥುನ ರಾಶಿಯವರ ಪಾಲಿಗೆ ಅತ್ಯಂತ ಒಳ್ಳೆಯ ಫಲಗಳನ್ನು ತರಲಿದೆ. ಹೊಸ ಜನರ ಜೊತೆಗೆ ನಿಮ್ಮ ಸಂಪರ್ಕ ಬೆಳೆಯಲಿದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಶುಕ್ರನ ಈ ಗೋಚರ ವಿದ್ಯಾರ್ಥಿ ವರ್ಗದ ಜನರಿಗೆ ಅತ್ಯಂತ ಅದ್ಭುತವಾಗಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಭೌತಿಕ ಸುಖವನ್ನು ಆನಂದಿಸುವಿರಿ. ಶಿಕ್ಷಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ನೀವು ಯಶಸ್ವಿಯಾಗುವಿರಿ.  

3. ಸಿಂಹ: ಸಿಂಹ ರಾಶಿಯ ಜಾತಕದವರ ಪಾಲಿಗೆ ಶುಕ್ರ ಗೋಚರ ಅತ್ಯುತ್ತಮ ಸಾಬೀತಾಗಲಿದೆ.  ವಿವಾಹಿತರಿಗೆ ಈ ಗೋಚರ ಲಾಭಕಾರಿಯಾಗಿದೆ. ಹೊಸ ಕೆಲಸ ಪ್ರಾರಂಭಿಸಲು ಬಯಸುವವರಿಗೆ ಈ ಸಮಯ ಅನುಕೂಲಕರವಾಗಿದೆ. ವಿದೇಶ ಯಾತ್ರೆಯ ಯೋಗ ನಿರ್ಮಾಣಗೊಳ್ಳುತ್ತಿದೆ. ನೌಕರಿಯ ಹುಡುಕಾಟದಲ್ಲಿರುವ ಜನರ ಹುಡುಕಾಟಕ್ಕೆ ತೆರೆಬೀಳಲಿದೆ. ಉತ್ತಮ ನೌಕರಿಯ ಪ್ರಸ್ತಾಪ ಸಿಗಬಹುದು. ಕಿರಿಯ ಸಹೋದರ-ಸಹೋದರಿಯರ ಬೆಂಬಲ ಸಿಂಹ ರಾಶಿಯ ಜಾತಕದವರಿಗೆ ಸಿಗಲಿದೆ.  

4. ಧನು: ಜನವರಿ 17 ರಿಂದ ಶನಿಯ ಸಾಡೆಸಾತಿಯಿಂದ ಮುಕ್ತಿ ಹೊಂದಿದ ಧನು ಜಾತಕದವರಿಗೆ ಶುಕ್ರಗೋಚರ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿ ವರ್ಗದ ಜನರಿಗೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ವಿವಾಹಿತರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಹಳೆ ವಿವಾದ ಅಂತ್ಯವಾಗಲಿದೆ. ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗಲಿದೆ. ವಿವಿಧ ಮೂಲಗಳಿಂದ ಹಣ ಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ನೌಕರಿಯಲ್ಲಿರುವವರಿಗೆ ಪದೋನ್ನತಿಯ ಜೊತೆಗೆ ಇನ್ಕ್ರೀಮೆಂಟ್ ಸಿಗುವ ಸಾಧ್ಯತೆ ಇದೆ.  

5. ಮೀನ: ಮೀನ ಜಾತಕದವರ ಮೇಲೆ ಶುಕ್ರನ ಸಂಪೂರ್ಣ ಕೃಪೆ ಇರಲಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಅತ್ತೆ ಮನೆಯವರ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಕಾಣಲು ಸಿಗಲಿದೆ. ಈ ಅವಧಿಯಲ್ಲಿ ಜನರನ್ನು ನೀವು ನಿಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುವಿರಿ. ಇದರಲ್ಲಿ ನಿಮ್ಮ ವಾಣಿಯ ಪ್ರಭಾವ ಹೆಚ್ಚಾಗುವುದನ್ನು ನೀವು ನೋಡಬಹುದು. ಆರ್ಥಿಕ ವಿಷಯದಲ್ಲಿ ತುಂಬಾ ಯೋಚಿಸಿ ಮುಂದುವರೆಯುವುದು ಉತ್ತಮ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link