ಅಂದು `ದರ್ಶನ್-ಸುದೀಪ್` ಸ್ನೇಹದ ಬಿರುಕಿಗೆ ಕಾರಣವಾಗಿದ್ದು ʼಕಿಚ್ಚ ಕೊಟ್ಟಿದ್ದ ಈ ಹೇಳಿಕೆʼ!
)
ಅಂಬರೀಶ್ ಮತ್ತು ವಿಷ್ಣುವರ್ಧನ್ ನಂತರ ದರ್ಶನ್ ಹಾಗೂ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ದಿಗ್ಗಜರು... ಕುಚಿಕುಗಳು ಎನಿಸಿಕೊಂಡಿದ್ದರು.. ಆದರೆ ಹಲವು ವರ್ಷಗಳ ಹಿಂದೆಯೇ ಇವರಿಬ್ಬರ ಸ್ನೇಹ ಮುರಿದುಬಿದ್ದಿತ್ತು..
)
ಸ್ಯಾಂಡಲ್‌ವುಡ್‌ಗೆ ಒಂದೇ ಸಲ ಎಂಟ್ರಿಕೊಟ್ಟ ದರ್ಶನ್ ಹಾಗೂ ಸುದೀಪ್ ಇಬ್ಬರು ಎಲ್ಲಿಗೆ ಹೋದ್ರು ಒಟ್ಟಿಗೆ ಹೋಗ್ತಾ ಇದ್ರು ಆದರೆ ಒಂದು ದಿನ ದರ್ಶನ್ ಏಕಾಏಕಿ ನನಗೂ ಸುದೀಪ್ ಮಧ್ಯೆ ಯಾವುದೇ ಸ್ನೇಹವಿಲ್ಲ.. ನಾವಿಬ್ಬರೂ ಬರೀ ಚಿತ್ರರಂಗದಲ್ಲಿರುವ ನಟರು ಮಾತ್ರ ಎಂದು ಪೋಸ್ಟ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದರು..
)
ಆದರೆ ಈ ಮುನಿಸಿಗೆ ಕಾರಣವೆಂದರೇ ನಟ ಸುದೀಪ್ ಸಂದರ್ಶನವೊಂದರಲ್ಲಿ ಕೊಟ್ಟಂತಹ ಹೇಳಿಕೆಯಾಗಿತ್ತು.. ಹೌದು ದರ್ಶನ್ ಅಭಿನಯದ ಮೊದಲ ಸಿನಿಮಾ ಮೆಜೆಸ್ಟಿಕ್.. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸುದೀಪ್ "ಆ ಚಿತ್ರದ ಆಫರ್ ನನಗೆ ಬಂದಿತ್ತು ಆದರೆ ನಾನು ಬ್ಯುಸಿ ಇದ್ದೆ.. ಹೀಗಾಗಿ ದರ್ಶನ್ ಅವರಿಂದ ಮಾಡಿಸಿ ಎಂದು ಹೇಳಿದ್ದೆ ಎಂದಿದ್ದರು.. ಆಗ ಸುದೀಪ್ ಕೊಟ್ಟ ಈ ಹೇಳಿಕೆ ದರ್ಶನ್ ಬೇಸರಕ್ಕೆ ಕಾರಣವಾಗಿತ್ತು..
ನಟ ದರ್ಶನ್ ಸುದೀಪ್ ಹೇಳಿಕೆಯನ್ನು ಖಂಡಿಸಿ,.. ಈ ಹೇಳಿಕೆಗೆ ಅವರು ಸ್ಪಷ್ಟನೆ ನೀಡಲಿ... ನನಗೆ ಅವರಿಂದ ಹೇಗೆ ಅವಕಾಶ ತಿಳಿಸಲಿ ಎಂದು ಆಗ್ರಹಿಸಿದ್ರು.. ಮತ್ತೊಂದು ಟ್ವೀಟ್ ಮಾಡಿ ನನಗೆ ಸುದೀಪ್ ಅವರಿಂದ ಸಿನಿಮಾ ಅವಕಾಶ ಸಿಕ್ಕಿಲ್ಲ.. ಎಂದು ಹೇಳಿದ್ದರು..
ಅಲ್ಲಿಂದ ಶುರುವಾದ ಇವರ ಮನಸ್ಥಾಪ ಇಂದಿಗೂ ಹಾಗೇ ಇದೆ.. ಇಬ್ಬರೂ ಒಂದಾಗುತ್ತಾರೆ ಎಂದು ಕನ್ನಡಾಭಿಮಾನಿಗಳು ಕಾಯುತ್ತಿದ್ದರು,, ಆದರೆ ಇದೀಗ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ..