ಸರ್ಕಾರಿ ನೌಕರರ ಬಹುದಿನದ ಬೇಡಿಕೆಗೆ ಅಸ್ತು !ಕನಿಷ್ಠ ವೇತನ 34,560 ರೂ.ಗೆ ಏರಿಕೆ

Tue, 08 Oct 2024-9:49 am,

8ನೇ ವೇತನ ಆಯೋಗದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಕಾರ್ಮಿಕ ಸಂಘಟನೆಗಳು ಮುಂದಿನ ವೇತನ ಆಯೋಗಕ್ಕಾಗಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಲೇ ಇವೆ.  

ಮಾಹಿತಿಯ ಪ್ರಕಾರ, ಸರ್ಕಾರದಿಂದ 8ನೇ ವೇತನ ಆಯೋಗದ ಅನುಷ್ಠಾನದ ಕರಡು ಜನವರಿ 1, 2026ರೊಳಗೆ ಸಿದ್ಧವಾಗಲಿದೆ.ಇದರ ಸಿದ್ದತೆ ಕೂಡಾ ನಡೆಯುತ್ತಿದೆ.8ನೇ ವೇತನ ಆಯೋಗದಲ್ಲಿ ಹಲವು ಬದಲಾವಣೆಗಳಾಗಬಹುದು ಎಂದೂ ಹೇಳಲಾಗಿದೆ.  

ಸಾಮಾನ್ಯವಾಗಿ,ವೇತನ ಆಯೋಗಗಳನ್ನು 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ.7ನೇ ವೇತನ ಆಯೋಗವನ್ನು 2014ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, 2016ರಲ್ಲಿ ಜಾರಿಗೆ ಬಂದಿದೆ.ಆ ಲೆಕ್ಕದ ಪ್ರಕಾರ 8ನೇ ವೇತನ ಆಯೋಗವು 2026ರಲ್ಲಿ ಜಾರಿಗೆ ಬರಬೇಕು.   

ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು 1 1/2 ರಿಂದ 2 ವರ್ಷಗಳು ಬೇಕಾಗುವುದರಿಂದ,ಈಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದರೆ ಮಾತ್ರ 2026ರ ವೇಳೆಗೆ ಅದನ್ನು ಜಾರಿಗೆ ತರಬಹುದು.ಇದಕ್ಕಾಗಿಯೇ ಸಂಘಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿವೆ.    

8ನೇ ವೇತನ ಆಯೋಗ ಜಾರಿಯಾದಾಗ ನೌಕರರ ವೇತನದಲ್ಲಿ ಭಾರೀ ಬದಲಾವಣೆಯಾಗಲಿದೆ. ಮೂಲ ವೇತನ ಮತ್ತು ಭತ್ಯೆಗಳಲ್ಲಿ ಉತ್ತಮ ಏರಿಕೆಯಾಗಲಿದೆ.ಪಿಂಚಣಿದಾರರ ಪಿಂಚಣಿಯಲ್ಲೂ ಹೆಚ್ಚಳವಾಗಲಿದೆ.

ಏಳನೇ ವೇತನ ಆಯೋಗವನ್ನು ರಚಿಸಿದಾಗ, ಮೂಲ ವೇತನವನ್ನು ನಿರ್ಧರಿಸುವ ಅಂಶವನ್ನು  3.68 ಕ್ಕೆ ಹೆಚ್ಚಿಸಬೇಕು ಎಂದು ನೌಕರರ ಸಂಘಗಳು ಒತ್ತಾಯಿಸಿದ್ದವು.ಆದರೆ, ಅಂದು ಸರ್ಕಾರ ಫಿಟ್‌ಮೆಂಟ್ ಅಂಶವನ್ನು 2.57 ನಿಗದಿಪಡಿಸಿತ್ತು.ಕನಿಷ್ಠ ವೇತನವನ್ನು 18,000ಕ್ಕೆ ಹೆಚ್ಚಿಸಲಾಗಿತ್ತು. 

ಆರನೇ ವೇತನ ಬ್ಯಾಂಡ್‌ಗೆ ಹೋಲಿಸಿದರೆ ಏಳನೇ ವೇತನ ಬ್ಯಾಂಡ್‌ನಲ್ಲಿ ಫಿಟ್‌ಮೆಂಟ್ ಅಂಶವನ್ನು ಆಧರಿಸಿ ತಿಂಗಳಿಗೆ 18,000 ಕನಿಷ್ಠ ವೇತನ, ಕನಿಷ್ಠ ಪಿಂಚಣಿ 9,000 ರೂ. ಗರಿಷ್ಠ ಪಿಂಚಣಿ 2,50,000ಕ್ಕೆ ಏರಿಕೆಯಾಗಿದೆ.  

8ನೇ ವೇತನ ಆಯೋಗವು 2026ರಲ್ಲಿ ಜಾರಿಗೆ ಬರಬಹುದು ಎನ್ನಲಾಗಿದೆ.ಹೀಗಾದರೆ ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 3.68 ಕ್ಕೆ ಹೆಚ್ಚಿಸಬಹುದು.ಆಗ ಕನಿಷ್ಠ ವೇತನ  18 ಸಾವಿರದಿಂದ 34,560 ರೂ.ಗೆ ಏರಬಹುದು.ಇದಲ್ಲದೇ ಗರಿಷ್ಠ ವೇತನ ಕೂಡಾ 2.5 ಲಕ್ಷದಿಂದ 4.8 ಲಕ್ಷಕ್ಕೆ ಏರಿಕೆಯಾಗಲಿದೆ.  

8ನೇ ವೇತನ ಆಯೋಗ ಜಾರಿಯಾದರೆ ಇತರೆ ಭತ್ಯೆಗಳಲ್ಲೂ ಭಾರಿ ಏರಿಕೆಯಾಗಲಿದೆ. ಹಣದುಬ್ಬರದಿಂದ ಬಳಲುತ್ತಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇದು ದೊಡ್ಡ ಪರಿಹಾರವನ್ನು ನೀಡುತ್ತದೆ.  

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ನೋಡಲು ಶಿಫಾರಸು ಮಾಡಲಾಗಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link