ಸ್ಟಾರ್‌ ನಾಯಕಿಯಾಗಿ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಕದ್ದಿದ್ದ ಈಕೆ.. ಇಂದು ಸುಪ್ರೀಂ ಕೋರ್ಟ್‌ನ ಖಡಕ್‌ ಲಾಯರ್‌!!

Wed, 01 Jan 2025-9:48 am,

Reshma Rathod: ಸಿನಿಮಾ ಇಂಡಸ್ಟ್ರಿಗೆ ಹಲವಾರು ಸುಂದರಿಯರು ಅವಕಾಶ ಅರಸಿ ಬರುತ್ತಾರೆ. ಅದರಲ್ಲಿ ಸಕ್ಸಸ್‌ ಕಾಣುವುದು ಮಾತ್ರ ಕೆಲವೇ ಜನ.ಕೆಲವರು ಸೋತ ನಂತರವೂ ಗೆಲ್ಲಲು ಹೋರಾಡಿದರೆ. ಇನ್ನೂ ಕೆಲವರು ಮೊದಲ ಸಿನಿಮಾದಲ್ಲಿ ಹಿಟ್‌ ಆದ ನಂತರ ದಿಢೀರನೆ ಸಿನಿಮಾ ಇಂಡಸ್ಟ್ರಿಯಿಂದ ಮರೆಯಾಗಿ ಹೋಗುತ್ತಾರೆ. ಹೀಗೆ ಮೊದಲ ಸಿನಿಮಾದಲ್ಲೆ ಹಿಟ್‌ ಕಂಡು ಸಿನಿಮಾ ಇಂಡಸ್ಟ್ರಿ ತೊರೆದ ನಟಿ ಇಂದು ಸುಪ್ರೀಮ್‌ ಕೋರ್ಟ್‌ನ ಖಡಕ್‌ ಲಾಯರ್ ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ...  

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರು ಒಂದೆ ಸಿನಿಮಾದಲ್ಲಿ ಸದ್ದು ಮಾಡಿ ಕಣ್ಮರೆಯಾಗಿ ಹೋಗುತ್ತಾರೆ. ಸಿನಿಮಾದಲ್ಲಿ ಸಕ್ಸಸ್‌ ಕಂಡ ನಂತರವೂ ಕೂಡ ಸಿನಿಮಾ ಇಂಡಸ್ಟ್ರಿಯನ್ನು ತೊರೆಯುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಹೀಗೆ ಒಂದೆ ಸಿನಿಮಾದಲ್ಲಿ ಹಿಟ್‌ ಕಂಡು ದಿಢೀರನೆ ಇಂಡಸ್ಟ್ರಿಯಿಂದ ಮರೆಯಾದ ಬ್ಯೂಟಿಯ ಕುರಿತಾದ ವಿಚಾರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  

ದಾರವಾಹಿಗಳಲ್ಲಿ ನಟಿಸುವ ಮೂಲಕ ಜನ ಮನ ಗೆದ್ದ ನಟಿ, ನಂತರ ಬಾಡಿಗಾರ್ಡ್‌ ಸಿನಿಮಾದಲ್ಲಿ ಹೀರೋಯಿನ್‌ ಗೆಳತಿಯ ಪಾತ್ರದಲ್ಲಿ ಕಾಣಿಸಿಕೊಂಡು ನಂತರ ಸಿನಿಮಾದಲ್ಲಿ ನಾಯಕ ನಟಿಯಾಗಿ ಅವಕಾಶ ಗಿಟ್ಟಿಸಿಕೊಂಡವರಲ್ಲಿ ನಟಿ ರೇಷ್ಮಾ ರತೋಡ್‌ ಕೂಡ ಒಬ್ಬರು.  

ನಟಿ ರೇಷ್ಮಾ ರಾತೋಡ್‌ ನಾಯಕಿಯಾಗಿ ನಟಿಸಿದ ಮೊದಲನೆ ಸಿನಿಮಾ ಸಕ್ಸಸ್‌ ಕಂಡಿತ್ತು. ನಂತರ ಅವರು ನಟಿಸಿದ ಯಾವುದೇ ಸಿನಿಮಾ ಕೂಡ ಹಿಟ್‌ ಆಗಲಿಲ್ಲ. ಸಿನಿಮಾದಲ್ಲಿ ಸಾಲು ಸಾಲು ಸೋಲಿನ ನಂತರ ನಟಿ ರೇಷ್ಮಾ ರಾತೋಡ್‌, 2017 ರಲ್ಲಿ ಸಿನಿಮಾಗಳಿಗೆ ಬ್ರೇಕ್‌ ಕೊಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ನಂತರ ಅವರು ಎಲ್‌ಎಲ್‌ಬಿ ಶಿಕ್ಷಣವನ್ನು ಸಹ ಪೂರ್ಣಗೊಳಿಸಿದರು.  

ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಗುರುತನ್ನು ಹಚ್ಚೆ ಹಾಕಲು ಆಗದ ರೇಷ್ಮಾ ಅವರು ರಾಜಕೀಯ ಹಾಗೂ ವಕೀಲೆಯಾಗಿ ತಮ್ಮ ಮುದ್ರೆಯನ್ನು ಹಚ್ಚೆಹಾಕಿದರು. ಇತ್ತೀಚೆಗಷ್ಟೆ ನಟಿ ಸುಪ್ರೀಂ ಕೋರ್ಟ್‌ನ ಲಾಯರ್‌ ಆಗಿ ಬಡ್ತಿ ಕೂಡ ಪಡೆದಿದ್ದು, ಇದಕ್ಕೆ ಸಂಬಂಧ ಪಟ್ಟ ಫೋಟೋ ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

ನಟಿ ರೇಷ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಸದ್ಯ ಇವರು ಹಂಚಿಕೊಂಡಿರುವ ಫೋಟೋವನ್ನು ನೋಡಿದ ನಂತರ ನೆಟ್ಟಿಗರು ನಿಮ್ಮ ಸಾಧನೆ ಹಲವರಿಗೆ ಸ್ಪೂರ್ಥಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link