ʼವಿರಾಟ್ ಕೊಹ್ಲಿ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ..ʼ ದಿಗ್ಗಜ ಕ್ರಿಕೆಟಿಗನ ಶಾಕಿಂಗ್ ಕಾಮೆಂಟ್!!
ಆಸ್ಟ್ರೇಲಿಯಾದಲ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ, ವಿರಾಟ್ ಅವರನ್ನು ಅಭಿಮಾನಿಗಳು ವಿವಿಧ ರೀತಿಯಲ್ಲಿ ಕೀಟಲೆ ಮಾಡಿದರು. ಆದರೆ ವಿರಾಟ್ ಕೊಹ್ಲಿ ಬಿಡುವವರಲ್ಲ. ಒಂದು ಕಡೆ ಬ್ಯಾಟ್‌ನಿಂದ ಉತ್ತರ ನೀಡುತ್ತಿದ್ದರು, ಹಾಗೆಯೇ ಬಾಯಲ್ಲಿಯೂ ಉತ್ತರಿಸುತ್ತಿದ್ದರು.
ವೀರೆಂದ್ರ ಸೆಹ್ವಾಗ್ 2017 ರಲ್ಲಿ ಸಂದರ್ಶನವೊಂದರಲ್ಲಿ... 2011-12ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಒಂದು ಘಟನೆ ಬಗ್ಗೆ ವಿವರಣೆ ನೀಡಿ ಅಲ್ಲದೇ ವಿರಾಟ್‌ಗೆ ಕಪಾಳಮೋಕ್ಷ ಮಾಡುವಷ್ಟು ಕೋಪವಿದೆ ಎಂದು ಹೇಳಿಕೆ ನೀಡಿದ್ದರು..
ಹಲವಾರು ವಿದ್ಯಾರ್ಥಿ ಪ್ರೇಕ್ಷಕರಿದ್ದ ಸಂದರ್ಶನದಲ್ಲಿ ಭಾಗವಹಿಸಿದ ವೀರೆಂದ್ರ ಸೆಹ್ವಾಗ್ ಅವರಿಗೆ ಸರ್ ನೀವು ಯಾವಾಗಲೂ ಮೋಜು ಮಾಡುವುದನ್ನು ನೋಡುತ್ತೀರಿ..ಆಟಗಾರರ ಮೇಲೆ ಎಂದಾದರೂ ಕೋಪಗೊಂಡಿದ್ದೀರಾ? ಎಂದು ಕೇಳಲಾಯಿತು..
ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೀರೇಂದ್ರ ಸೆವಾಗ್, 'ಹೌದು, ಒಮ್ಮೆ ನಾವು ಆಸ್ಟ್ರೇಲಿಯಾದಲ್ಲಿ ಆಡುತ್ತಿದ್ದಾಗ ಬೌಂಡರಿ ಲೈನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ತುಂಬಾ ಕೋಪಗೊಂಡಿದ್ದರು.. ಏಕೆಂದರೆ ಆಗ ಅವರಿಗೆ ಎದುರಾಳಿ ಆಟಗಾರರೊಬ್ಬರು ಗ್ಯಾಲರಿಯಿಂದ ಸರಿ ಬೆರಳು (ಮಧ್ಯದ ಬೆರಳು) ತೋರಿಸಿದ್ದರು.."
"ಇದರಿಂದ ವಿರಾಟ್ ಕೂಡ ಪ್ರತಿದಾಳಿ ನಡೆಸಿದರು... ಅಲ್ಲದೇ ಈ ವಿಚಾರವಾಗಿ ಅಂಪೈರ್ ಕೂಡ ಮಾತನಾಡಿ ಅವರಿಗೆ ಮ್ಯಾಚ್ ರೆಫರಿ ಅವರಿಗೆ ದಂಡ ವಿಧಿಸಲಾಯಿತು.. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡುತಿದ್ದರು.. ಟೆಸ್ಟ್ ನಲ್ಲಿ ವಿರಾಟ್ 75 ರನ್ ಗಳಿಸಿದ್ದರು"
"ಆದರೆ ಎಲ್ಲಿ ಅವರ ವರ್ತನೆಗಾಗಿ ಅವರನ್ನು ನಿಷೇಧಿಸುತ್ತಾರೋ ಇದರಿಂದ ಮುಂದಿನ ಪಂದ್ಯದಲ್ಲಿ ನಾವು ಹೆಚ್ಚು ಒತ್ತಡಕ್ಕೆ ಒಳಗಾಗುತ್ತೇವೋ ಎಂದು ನಾನು ಹೆದರುತ್ತಿದ್ದೆ. ಆ ವೇಳೆ ನನಗೆ ವಿರಾಟ್‌ಗೆ ಕಪಾಳ ಮೋಕ್ಷ ಮಾಡುವಷ್ಟು ಕೋಪವಿತ್ತು.. ಆಗ ನಾನು ನಂತರ ವಿರಾಟ್‌ಗೆ ಹೇಳಿದೆ, ನಿನ್ನನ್ನು ಗಡಿಪಾರು ಮಾಡವಂತೆ ವರ್ತಿಸಬೇಡ. ನಿನ್ನಿಂದಾಗಿ ತಂಡ ಸೋಲಬಹುದು.ʼ ಎಂದು ಹೇಳಿದ್ದರಂತೆ..
ಇನ್ನು ಮೊದಲೆರಡು ಟೆಸ್ಟ್ ಗಳಲ್ಲಿ ವಿರಾಟ್ ಬ್ಯಾಟ್ ನಿಂದ ಬಿಗ್ ಇನ್ನಿಂಗ್ಸ್ ಆಗಲಿಲ್ಲ. ಬಳಿಕ ಎರಡು ಇನ್ನಿಂಗ್ಸ್‌ಗಳಲ್ಲಿ 44 ಮತ್ತು 75 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್ ಗಳಿಸಿದರು. ಭಾರತ ಸರಣಿ ಸೋತರೂ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು ವಿಶೇಷ.