ವಿರಾಟ್ ಮ್ಯಾನೇಜರ್ ಆಗಿದ್ದ ಈಕೆ ಇಂದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಪತ್ನಿ! 5 ಮಿಲಿಯನ್ ಆಸ್ತಿಯ ಒಡತಿ ಈ ಬಾಲಕಿ ಯಾರೆಂದು ಗೆಸ್ ಮಾಡಿ
![ರಿತಿಕಾ ಸಜ್ದೇಹ್ Ritika Sajdeh Childhood photo](https://kannada.cdn.zeenews.com/kannada/sites/default/files/2024/07/30/427357-ritika-sajdeh-childhood-photo-1.jpg?im=FitAndFill=(500,286))
ಇಲ್ಲೊಂದು ಫೋಟೋ ಇದೆ. ಈ ಫೋಟೋದಲ್ಲಿರುವ ಬಾಲಕಿ ಯಾರೆಂದು ಗೆಸ್ ಮಾಡಬಹುದೇ? ಸುಳಿವನ್ನೂ ಸಹ ಈ ವರದಿಯಲ್ಲಿ ನೀಡಲಿದ್ದೇವೆ.
![ರಿತಿಕಾ ಸಜ್ದೇಹ್ Ritika Sajdeh Childhood photo](https://kannada.cdn.zeenews.com/kannada/sites/default/files/2024/07/30/427356-ritika-sajdeh-childhood-photo-7.jpg?im=FitAndFill=(500,286))
ಅಂದಹಾಗೆ ಈ ಫೋಟೋದಲ್ಲಿರುವ ಬಾಲಕಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ. ಅಷ್ಟೇ ಅಲ್ಲದೆ, ಸುಮಾರು 10 ಕೋಟಿ ಆಸ್ತಿಗೆ ಒಡತಿಯಾಗಿದ್ದಾಳೆ.
![ರಿತಿಕಾ ಸಜ್ದೇಹ್ Ritika Sajdeh Childhood photo](https://kannada.cdn.zeenews.com/kannada/sites/default/files/2024/07/30/427355-ritika-sajdeh-childhood-photo-8.jpg?im=FitAndFill=(500,286))
ಇನ್ನೂ ಕೂಡ ಈಕೆ ಯಾರೆಂದು ತಿಳಿಯುತ್ತಿಲ್ಲವಾದರೆ, ಉತ್ತರ ಇಲ್ಲಿದೆ ನೋಡಿ.
ಈ ಬಾಲಕಿ ಬೇರಾರು ಅಲ್ಲ... ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್.
ರಿತಿಕಾ ಸಜ್ದೇಹ್ ಡಿಸೆಂಬರ್ 21, 1987 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. 2024 ರ ಹೊತ್ತಿಗೆ, ರಿತಿಕಾ ನಿವ್ವಳ ಮೌಲ್ಯವು ಸುಮಾರು INR 10 ಕೋಟಿ ಎಂದು ಅಂದಾಜಿಸಲಾಗಿದೆ.
ರಿತಿಕಾ ಸಜ್ದೇಹ್ ಕ್ರೀಡಾ ಮ್ಯಾನೇಜರ್ ಆಗಿದ್ದು, ಈ ಹಿಂದೆ ವಿರಾಟ್ ಕೊಹ್ಲಿಗೆ ಕೂಡ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಅದಾದ ಬಳಿಕ ರೋಹಿತ್ ಜೊತೆ ಪ್ರೀತಿಯಲ್ಲಿ ಬಿದ್ದ ರಿತಿಕಾ, ಅವರನ್ನೇ ವಿವಾಹವಾದರು.
ರಿತಿಕಾ ಸಜ್ದೇ ತಂದೆ ಬಾಬಿ ಸಜ್ದೇಹ್ ಮತ್ತು ತಾಯಿ ಟೀನಾ ಸಜ್ದೇಹ್. ಇನ್ನು ರೋಹಿತ್ ಮತ್ತು ರಿತಿಕಾ 13 ಡಿಸೆಂಬರ್ 2015 ರಂದು ವಿವಾಹವಾದರು. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ʼನಲ್ಲಿ ಅದ್ಧೂರಿ ಸಮಾರಂಭವನ್ನು ನಡೆಸಲಾಗಿದ್ದು, ಈ ಮದುವೆಗೆ ಕ್ರಿಕೆಟ್ ಮತ್ತು ಬಾಲಿವುಡ್ʼನ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು.