ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತದ ಆರ್ಭಟ

Wed, 26 May 2021-6:54 pm,

ಒಡಿಶಾ ಮತ್ತು ಬಂಗಾಳದ ಹೊರತಾಗಿ, ಚಂಡಮಾರುತದ ಪರಿಣಾಮ ಬಿಹಾರ ಮತ್ತು ಜಾರ್ಖಂಡ್‌ ನಲ್ಲಿಯೂ ಕಂಡುಬಂತು. ಅಲ್ಲಿನ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಂತೆಯೇ, ಚಂಡಮಾರುತದಿಂದ ಹಾನಿಗೊಳಗಾದ ರಾಜ್ಯಗಳಲ್ಲಿ ನೂರಾರು ಮರಗಳನ್ನು ಕಡಿದಿರುವ ಪರಿಣಾಮ ವಿದ್ಯುತ್ ಸರಬರಾಜಿನ ಮೇಲೂ ಬಿದ್ದಿದೆ. ಎಲ್ಲೆಡೆ ರಕ್ಷಣಾ ಪರಿಹಾರ ಕಾರ್ಯಗಳು ಭರದಿಂದ ಸಾಗಿವೆ.  (ಫೋಟೊ ಕೃಪೆ: ಪಿಟಿಐ)

 ಚಂಡ ಮಾರುತದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತಾ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ (ಫೋಟೊ ಕೃಪೆ: ರಾಯಟರ್ಸ್)

 ದೇವರ ಮೇಲಿನ ನಂಬಿಕೆ ಮತ್ತು ಭಕ್ತಿಗೆ ಅದ್ಭುತ ಶಕ್ತಿ ಎನ್ನುತ್ತಾರೆ. ಒಡಿಶಾದ ದೇವಾಲಯವೊಂದರ ಅರ್ಚಕರ ಈ ಚಿತ್ರವನ್ನು ನೋಡುವಾಗ ಈ ಮಾತು ನಿಜವೇನೋ ಅನ್ನಿಸುತ್ತಿದೆ.  (ಫೋಟೊ ಕೃಪೆ: ರಾಯಟರ್ಸ್)

ಚಂಡಮಾರುತದ ಪರಿಣಾಮವಾಗಿ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ, ಅನೇಕ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.  (ಫೋಟೊ ಕೃಪೆ: ಎಎನ್‌ಐ)

ಚಂಡಮಾರುತದ ತೀವ್ರತೆಯಿಂದಾಗಿ, ಭುವನೇಶ್ವರದಿಂದ ಕೋಲ್ಕತ್ತಾದ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.  (ಫೋಟೊ ಕೃಪೆ: ಎಎನ್‌ಐ)

ಪಶ್ಚಿಮ ಬಂಗಾಳದಲ್ಲಿ ಒಂದೆಡೆ, ಚಂಡಮಾರುತದ ಆರ್ಭಟವಾದರೆ ಮತ್ತೊಂದೆಡೆ, 3.8 ತೀವ್ರತೆಯ ಭೂಕಂಪ ಕೂಡಾ ಸಂಭವಿಸಿದೆ. ಒಡಿಶಾದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಿದ ಯಾಸ್  ಮುಂದೆ ಸಾಗಿದೆ. ಆದರೆ ಪಶ್ಚಿಮಬಂಗಾಳದಲ್ಲಿ ಭಾರೀ ಹಾನಿಯುಂಟು ಮಾಡಿದೆ. ಚಂಡಮಾರುತ ಎದುರಿಸಲು ರಾಜ್ಯದಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ಪ್ರಕೃತಿಯ ಮುನಿಸಿದ ಎದುರು ಯಾವುದೂ ಪ್ರಯೋಜನಕ್ಕೆ ಬಾರಲೇ ಇಲ್ಲ. ಈ ಚಿತ್ರ ಪ್ರಕೃತಿಯ ಪ್ರಕೋಪ ಹೇಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಈ ಫೋಟೋ ಪೂರ್ವ ಮಿಡ್ನಾಪುರದ್ದು. ಚಂಡಮಾರುತದಿಂದ ಹೆಚ್ಚನ ಹಾನಿಗೊಳಗಾದ ಪ್ರದೇಶಗಳೆಂದರೆ ಪೂರ್ವ ಮಿಡ್ನಾಪುರ ಮತ್ತು ದಕ್ಷಿಣ 24 ಪರಗಣ.  (ಫೋಟೊ ಕೃಪೆ: ಎಎನ್‌ಐ)

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಈ ಚಂಡಮಾರುತವನ್ನು ಎದುರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿತ್ತು. (ಫೋಟೊ ಕೃಪೆ: ರಾಯಟರ್ಸ್)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link