ಒಂದು ಕಪ್ ಮೊಸರಿಗೆ ಚಿಟಕಿ ಈ ಪುಡಿ ಬೆರೆಸಿ ಸೇವಿಸಿ!ದುಂಡಗಿರುವ ಹೊಟ್ಟೆ ವಾರದಲ್ಲಿ ಚಪ್ಪಟೆಯಾಗುವುದು ನೂರಕ್ಕೆ ನೂರು ಗ್ಯಾರಂಟಿ !
ತೂಕವನ್ನು ಕಡಿಮೆ ಮಾಡಬೇಕಾದರೆ ಮೊದಲು ತೂಕ ಕಡಿಮೆ ಮಾಡಲು ಸಹಾಯ ಮಾಡುವ ಆಹಾರವನ್ನು ಸೇವಿಸಬೇಕು.ತೂಕ ನಷ್ಟಕ್ಕೆ ಸಹಾಯ ಮಾಡುವ ಆಹರ ಪದಾರ್ಥಗಳಲ್ಲಿ ಮೊದಲು ಬರುವುದೇ ಮೊಸರು.
ಹೌದು, ಎಷ್ಟೇ ಪ್ರಯತ್ನ ಪಟ್ಟರೂ ಕರಗದ ಹಠಮಾರಿ ಬೊಜ್ಜನ್ನು ಕರಗಿಸುವ ಶಕ್ತಿ ಮೊಸರಿಗಿದೆ.ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಕರಗುವುದು ನಿಮ್ಮ ಗಮನಕ್ಕೆ ಬರುತ್ತದೆ.
ಮೊಸರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.ಚಯಾಪಚಯ ಕ್ರಿಯೆಯ ಹೆಚ್ಚಳ ಎಂದರೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯ ಪ್ರಮುಖ ಹಂತ.
ತೂಕ ಇಳಿಸಿಕೊಳ್ಳಬೇಕಾದರೆ ಹೆಚ್ಚು ಪ್ರೋಟೀನ್ ಭರಿತ ಆಹಾರ ಸೇವಿಸಬೇಕು, ಕಾರ್ಬೋಹೈಡ್ರೇಟ್ ಅನ್ನು ಕಡಿಮೆ ಮಾಡಬೇಕು.ಮೊಸರಿನಲ್ಲಿ ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ.ಹಾಗಾಗಿ ಸಣ್ಣಗಾಗ ಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆ.
ಕೇವಲ ಮೊಸರು ಸೇವಿಸುವುದಲ್ಲ.ಮೊಸರಿಗೆ ಒಂದು ಚಮಚ ಜೀರಿಗೆ ಪುಡಿ ಮತ್ತು ಮೆಂತ್ಯೆ ಪುಡಿ ಬೆರೆಸಿ ಸೇವಿಸಬೇಕು. ರುಚಿಗೆ ಸ್ವಲ್ಪ ಡ್ರೈ ಫ್ರುಟ್ಸ್ ಸೇರಿಸಿದರೂ ಅಡ್ಡಿಯಿಲ್ಲ.
ಮೆಂತ್ಯೆ ಮತ್ತು ಜೀರಿಗೆ ಕೂಡಾ ಬೊಜ್ಜು ಕರಗಿಸಲು ಸಹಾಯ ಮಾಡುವ ಪದಾರ್ಥಗಳು. ಹಾಗಾಗಿ ಮೊಸರು ಮೆಂತ್ಯೆ, ಜೀರಿಗೆಯನ್ನು ಜೊತೆಯಾಗಿ ಸೇವಿಸಿದರೆ ದೇಹದ ಬೊಜ್ಜು ಬಹಳ ಬೇಗನೆ ಕರಗಲು ಆರಂಭವಾಗುತ್ತದೆ.
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.