ದಿನಕ್ಕೊಂದೇ ಲೋಟ ಕುಡಿದರೆ ಸಾಕು!ಯೂರಿಕ್ ಆಸಿಡ್ ಕರಗಿಸುವುದರೊಂದಿಗೆ ಕೀಲುಗಳ ಊತ ಮತ್ತು ನೋವಿಗೂ ಗುಡ್ ಬೈ
ಪ್ಯೂರಿನ್ ಭರಿತ ಆಹಾರಗಳನ್ನು ತಿನ್ನುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ.ಆದರೆ, ಕೆಲವು ಆರೋಗ್ಯಕರ ಪಾನೀಯಗಳು ಯೂರಿಕ್ ಆಮ್ಲವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ.
ನಿಂಬೆ ನೀರು ದೇಹದ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಇದು ಹೆಚ್ಚಿನ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ.ಹಾಗಾಗಿ ಯೂರಿಕ್ ಆಸಿಡ್ ಹರಳುಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಅರಿಶಿನದಲ್ಲಿ ಕರ್ಕ್ಯುಮಿನ್ ನಂತಹ ಶಕ್ತಿಯುತ ಅಂಶ ಅಡಗಿರುತ್ತದೆ. ಅರಿಶಿನದ ಉರಿಯೂತ ನಿವಾರಕ ಗುಣದಿಂದಾಗಿ ಇದು ಊತವನ್ನು ಕಡಿಮೆ ಮಾಡುತ್ತದೆ. ಅರಿಶಿನ ಹಾಲನ್ನು ನಿಯಮಿತವಾಗಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಕಲ್ಲಂಗಡಿಯಲ್ಲಿರುವ ಸಿಟ್ರುಲಿನ್ ನಂತಹ ಅಂಶಗಳು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.ಕಲ್ಲಂಗಡಿ ಕತ್ತರಿಸಿ ನೇರವಾಗಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಅದಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಮತ್ತು ಕರಿಮೆಣಸು ಸೇರಿಸಿ ಕುಡಿಯಬೇಕು.
ಸೌತೆಕಾಯಿ ರಸ ದೇಹದಿಂದ ಯೂರಿಕ್ ಆಮ್ಲವನ್ನು ತೆಗೆದುಹಾಕುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸೌತೆಕಾಯಿಯನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಇದಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಸೇರಿಸಬೇಕು. ಹೀಗೆ ತಯಾರಿಸಿದ ರಸವನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ಕುಡಿಯಬಹುದು.
ಆಯುರ್ವೇದದಲ್ಲಿ ಶುಂಠಿಗೆ ಔಷಧಿಯ ಸ್ಥಾನಮಾನ ನೀಡಲಾಗಿದೆ.ಅದರ ಉರಿಯೂತದ ಗುಣಲಕ್ಷಣಗಳಿಂದಾಗಿ,ಶುಂಠಿಯು ಯೂರಿಕ್ ಆಮ್ಲದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.ಇದು ಯೂರಿಕ್ ಆಮ್ಲದಿಂದ ಉಂಟಾಗುವ ನೋವಿನಿಂದ ಕೂಡ ಪರಿಹಾರವನ್ನು ನೀಡುತ್ತದೆ.(ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.)