ಮೊಬೈಲ್ ನಲ್ಲಿ ಈ ಐದು ಆಪ್ ಗಳಿದ್ದರೆ ಸುಲಭವಾಗಲಿದೆ ನಿಮ್ಮ ಕೆಲಸ

Fri, 18 Jun 2021-3:08 pm,

mParivahan ಅಪ್ಲಿಕೇಶನ್ ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಾರಂಭಿಸಿದೆ. ಈ ಮೂಲಕ ನಿಮ್ಮ ಹತ್ತಿರದ ಆರ್‌ಟಿಒ ಕಚೇರಿ ಮತ್ತು ಹತ್ತಿರದ ಮಾಲಿನ್ಯ ಪರಿಶೀಲನಾ ಕೇಂದ್ರ ಎಲ್ಲಿದೆ ಎಂಬುದನ್ನು  ಸುಲಭವಾಗಿ ಕಂಡುಹಿಡಿಯಬಹುದು. ಈ ಅಪ್ಲಿಕೇಶನ್ ಮೂಲಕ Moke Driving License Test ಸಹ ನೀಡಬಹುದು. ಅದೇ ಸಮಯದಲ್ಲಿ, ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸುವಾಗಲೂ ಈ ಆಪ್ ಸಹಾಯಕ್ಕೆ ಬರುತ್ತದೆ. ಈ ಅಪ್ಲಿಕೇಶನ್ ನಲ್ಲಿ ಕಾರು, ಬೈಕು ನೋಂದಣಿಗೆ ಸಂಬಂಧಿಸಿದ ಎಲ್ಲಾ ವಿವರಗಳು ಸಹಾ ಸಿಗುತ್ತದೆ.   

mPassport ಅಪ್ಲಿಕೇಶನ್ ಅನ್ನು ವಿದೇಶಾಂಗ ಸಚಿವಾಲಯ ಪ್ರಾರಂಭಿಸಿದೆ. ಇದರ ಸಹಾಯದಿಂದ, ಕುಳಿತಲ್ಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿಯ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಈ ಅಪ್ಲಿಕೇಶನ್‌ನಲ್ಲಿ, ಪಾಸ್‌ಪೋರ್ಟ್ ಸೇವೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇನ್ನು ಹತ್ತಿರದ ಪಾಸ್‌ಪೋರ್ಟ್ ಕೇಂದ್ರಕ್ಕೆ ಹೋಗಲು ಬಯಸಿದರೆ, ಅದರ ವಿಳಾಸವನ್ನೂ ತಿಳಿಸುತ್ತದೆ.

BHIM UPI ಅಪ್ಲಿಕೇಶನ್ ಅನ್ನು ಯುಪಿಐ ಆಧರಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಯಾರಿಗೆ ಬೇಕಾದರೂ ಹಣವನ್ನು ಕಳುಹಿಸಬಹುದು. ಇದಲ್ಲದೆ, ಯಾವುದೇ ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ಈವರೆಗೆ ಭಾರತದಲ್ಲಿ ಕೋಟ್ಯಂತರ ಜನರು ಈ ಅಪ್ಲಿಕೇಶನ್‌ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. 

mAadhaar ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಸಚಿವಾಲಯ ಸಿದ್ಧಪಡಿಸಿದೆ. ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಡಿಜಿಟಲ್ ರೂಪದಲ್ಲಿ ಇರಿಸಬಹುದು. ಇದನ್ನು ಆಧಾರ್ ಕಾರ್ಡ್ ಸ್ಟೋರ್ ಮಾಡುವ ಸಾಫ್ಟ್ ಕೋಪಿ ಆವೃತ್ತಿ ಎಂದು ಹೇಳಬಹುದು. ಇಲ್ಲಿ ಆಧಾರ್ ನ ವಿಳಾಸ, ಭಾಷೆ ಮುಂತಾದ ಕೆಲಸಗಳನ್ನು ಸಹ ಮಾಡಬಹುದು. 

ಡಿಜಿಲಾಕರ್ (DigiLocker) ಅಪ್ಲಿಕೇಶನ್ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ನಿಮ್ಮ ಪ್ರಮುಖ ದಾಖಲೆಗಳಾದ ಆಧಾರ್, ಡ್ರೈವಿಂಗ್ ಲೈಸೆನ್ಸ್, ಬೈಕ್ ಇನ್ಶುರೆನ್ಸ್, Rc ಇತ್ಯಾದಿಗಳನ್ನು ಕ್ಲೌಡ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇದರಲ್ಲಿ, ನಿಮ್ಮ ಕಾನೂನು ದಾಖಲೆಗಳ ಸ್ಕ್ಯಾನ್ ಮಾಡಿದ ನಕಲನ್ನು 1 ಜಿಬಿ ವರೆಗೆ ಅಪ್‌ಲೋಡ್ ಮಾಡಬಹುದು. ಇದರ ನಂತರ ನೀವು ಆ ದಾಖಲೆಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾಗಿಲ್ಲ. ಯಾವುದೇ ಅಧಿಕಾರಿ ಅಥವಾ ಪೊಲೀಸರು ನಿಮ್ಮನ್ನು ಆಧಾರ್ ಕಾರ್ಡ್ ಕೇಳಿದರೆ ನೀವು ಅವರಿಗೆ ಈ ಸಾಫ್ಟ್ ಕಾಪಿ ತೋರಿಸಬಹುದು. ಇದು ಸಂಪೂರ್ಣವಾಗಿ ಮಾನ್ಯವಾಗಿರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link