ನಿಮ್ಮಲ್ಲಿ ಈ ಅರ್ಹತೆ ಇದ್ದರೆ ಸಾಕು ಅಂಬಾನಿ ಮನೆ ಆಂಟಿಲಿಯಾದಲ್ಲಿ ಕೆಲಸ ಪಡೆಯಲು !ಕೋಟಿಗಳಲ್ಲಿ ಇರುವುದು ವೇತನ ಪ್ಯಾಕೇಜ್
ಅಂಬಾನಿ ಕುಟುಂಬವು ತನ್ನ ವ್ಯಾಪಾರ ಮತ್ತು ಜೀವನಶೈಲಿಗೆ ಹೆಸರುವಾಸಿಯಾಗಿದೆ.ವಿಶ್ವದ ಅತ್ಯಂತ ದುಬಾರಿ ಮನೆ ಅಥವಾ ಅರಮನೆಯು ಮುಂಬೈನಲ್ಲಿರುವ ಆಂಟಿಲಿಯಾ ಆಗಿದೆ.ಇದು ಮುಕೇಶ್ ಅಂಬಾನಿ ಒಡೆತನದಲ್ಲಿದೆ.
ಈ ಮನೆಯ ನಿರ್ವಹಣೆ ಅಷ್ಟು ಸುಲಭವಲ್ಲ.ಅಂಬಾನಿಯವರ ಈ ಮನೆಯಲ್ಲಿ ಎಷ್ಟು ಜನ ವಾಸವಿದ್ದಾರೆ, ಈ ಮನೆಯನ್ನು ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.
ಈ ಅರಮನೆ ಎಷ್ಟು ದೊಡ್ಡದಿದೆಯೋ ಅಷ್ಟೇ ಸಂಖ್ಯೆಯ ಸಿಬ್ಬಂದಿ ಇಲ್ಲಿದೆ.ಇಲ್ಲಿ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಾರೆ.ಇಲ್ಲಿ ಶಿಫ್ ಪ್ರಕಾರ ಕೆಲಸ ಮಾಡಬೇಕಾಗುತ್ತದೆ.ಅಷ್ಟೇ ಅಲ್ಲ,ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಇಂಟರ್ ವ್ಯೂ ಪಾಸ್ ಆಗಬೇಕು.
ಮಾಧ್ಯಮಗಳ ಪ್ರಕಾರ ಮುಖೇಶ್ ಅಂಬಾನಿ ಮನೆಯಲ್ಲಿ ಸುಮಾರು 600 ಜನ ಸಿಬ್ಬಂದಿ ಕೆಲಸ ಮಾಡುತ್ತಾರೆ.ಗುಡಿಸುವುದು,ಒರೆಸುವುದು,ಅಡುಗೆ ಮಾಡುವುದು, ಬಟ್ಟೆ ಒಗೆಯುವುದು ಹೀಗೆ ಎಲ್ಲದವೂ 24 *7 ಲೆಕ್ಕದಲ್ಲಿ ನಡೆಯುತ್ತದೆ.
ಈ ಮನೆಯಲ್ಲಿ ಕೆಲಸ ಮಾಡುವವರು ಶಿಕ್ಷಣ ಪಡೆದಿರಲೇ ಬೇಕು. ಅಂಬಾನಿ ಮನೆಯ ಕೆಲಸಕ್ಕೆ ನೇಮಕಗೊಳ್ಳುವ ಮೊದಲು ಹಲವಾರು ಹಂತಗಳ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ.ಇಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕೆಲಸ ಪಡೆಯಲು, ಅಭ್ಯರ್ಥಿಯು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯನ್ನು ಹೊಂದಿರಬೇಕು.
ಮುಕೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಾಜಮನೆತನದ ಸೌಲಭ್ಯಗಳು ಸಿಗುತ್ತವೆ.ಸಿಬ್ಬಂದಿಗೆ ಉಳಿದುಕೊಳ್ಳಲು ಖಾಸಗಿ ಕೊಠಡಿ ನೀಡಲಾಗುತ್ತದೆ.ಆಂಟಿಲಿಯಾದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಭಾರೀ ಸಂಬಳ ಸಿಗುತ್ತದೆ.
ಆಂಟಿಲಿಯಾದ, ಸ್ವೀಪರ್‌ಗಳು ತಿಂಗಳಿಗೆ ಸುಮಾರು 2 ಲಕ್ಷ ರೂ.ವೇತನ ಪಡೆಯುತ್ತಾರೆ ಎನ್ನಲಾಗಿದೆ. ಈ ವೇತನವು ವೈದ್ಯಕೀಯ ಭತ್ಯೆ ಮತ್ತು ಶಿಕ್ಷಣ ಭತ್ಯೆಯನ್ನು ಒಳಗೊಂಡಿರುತ್ತದೆ.