OnePlus 12 specifications: ಅತ್ಯಂತ ಅಗ್ಗದ ಬೆಲೆಗೆ OnePlus 12 ಲಭ್ಯ, ಇಂದೇ ಖರೀದಿಸಿ

Mon, 12 Aug 2024-9:05 pm,

ಒನ್‌ಪ್ಲಸ್ 12 ಫೋನಿನ 12GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 64,999 ರೂ. ಇದೆ. 5,000 ರೂ.ಗಳ ಆಫರ್‌ನೊಂದಿಗೆ ನೀವು ಇದನ್ನು 59,999 ರೂ.ಗೆ ಖರೀದಿಸಬಹುದು. 16GB RAM + 512GB ಸ್ಟೋರೇಜ್‌ ಮಾದರಿಯ ಬೆಲೆ 69,999 ರೂ. ಇದೆ. ಇದರ ಮೇಲೆಯೂ 5,000 ರೂ. ಡಿಸ್ಕೌಂಟ್‌ ಇದ್ದು, 64,999 ರೂ.ಗೆ ಖರೀದಿಗೆ ಲಭ್ಯವಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಗರಿಷ್ಠ 7,000 ರೂ.ವರೆಗೆ ಡಿಸ್ಕೌಂಟ್ ಪಡೆಯಬಹುದು. ಇದಲ್ಲದೆ 12 ತಿಂಗಳವರೆಗೆ ನೋ ಕಾಸ್ಟ್ EMI ಸೌಲಭ್ಯ ಸಹ ಪಡೆಯಬಹುದು. ಈ ಒನ್‌ಪ್ಲಸ್ 12 ಫೋನ್ ಗ್ಲೇಶಿಯಲ್ ವೈಟ್, ಸಿಲ್ಕಿ ಬ್ಲ್ಯಾಕ್ ಮತ್ತು ಫ್ಲೋವಿ ಎಮರಾಲ್ಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ 6.82 ಇಂಚಿನ 2K ಬಾಗಿದ OLED ProXDR ಡಿಸ್ಲ್ಪೇಯನ್ನು ಹೊಂದಿದೆ. ಈ ಫೋನ್ 120Hz ರಿಫ್ರೆಶ್ ರೇಟ್, QHD+ ಜೊತೆಗೆ 3168‍1 x 440 ಪಿಕ್ಸೆಲ್‌ಗಳ ರೆಸಲ್ಯೂಶನ್, 4500 nits ಗರಿಷ್ಠ ಬ್ರೈಟ್‌ನೆಸ್‌, 2160Hz PWM ಮಬ್ಬಾಗಿಸುವಿಕೆಯೊಂದಿಗೆ ಲಭ್ಯವಿದೆ. ಡಿಸ್ಲ್ಪೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ. ಒನ್‌ಪ್ಲಸ್ 12 ಫೋನ್ Snapdragon 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಚಿಪ್‌ಸೆಟ್‌ಅನ್ನು Adreno 750 ಚಿಪ್‌ಸೆಟ್, 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಇದು ಕ್ರಯೋ ವೆಲಾಸಿಟಿ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಒನ್‌ಪ್ಲಸ್ 12 ಮೊಬೈಲ್ Android 14 ಆಧಾರಿತ OxygenOS 14ಅನ್ನು ಹೊಂದಿದೆ. ಈ ಫೋನ್ 4 ಆಂಡ್ರಾಯ್ಡ್‌ ಅಪ್‌ಡೇಟ್‌ ಮತ್ತು 5 ವರ್ಷಗಳ ಭದ್ರತಾ ಅಪ್‌ಡೇಟ್‌ಗಳನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್ 5,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W ವೇಗದ ಚಾರ್ಜಿಂಗ್ ಮತ್ತು 50W AIRVOOC ವೈರ್ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ ಅನ್ನು ಕೇವಲ 26 ನಿಮಿಷಗಳಲ್ಲಿ ಸಂಪೂರ್ಣ (ಶೇ.100 ರಷ್ಟು) ಚಾರ್ಜ್ ಮಾಡಬಹುದು.  

ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50MP Sony LYT 808 ಮುಖ್ಯ ಕ್ಯಾಮೆರಾ, OIS ಜೊತೆಗೆ 64MP OmniVision OV64B ಪೆರಿಸ್ಕೋಪ್ ಲೆನ್ಸ್, 3X ಝೂಮಿಂಗ್ ಸಾಮರ್ಥ್ಯ ಮತ್ತು 48MP ಸೋನಿ IMX581 ಕ್ಯಾಮೆರಾ ಹೊಂದಿದೆ. ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಫ್ರಂಟ್ ಕ್ಯಾಮೆರಾ ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link