ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದು
ರಾತ್ರಿ ನಿದ್ದೆಯೇ ಬರುವುದಿಲ್ಲ ಎಂದು ಅನೇಕ ಮಂದಿ ದೂರುತ್ತಿರುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಏನೇ ಮಾಡಿದರೂ ನಿದ್ದೆ ಬರುವುದಿಲ್ಲ. ಮಗ್ಗುಲು ಮಲಗಿಸಿಯೇ ರಾತ್ರಿ ಬೆಳಕಾಗಿಸುತ್ತಾರೆ.
ಕೆಲವರು ನಿದ್ದೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಮಾತ್ರೆ ತೆಗೆದುಕೊಳ್ಳುವ ಹವ್ಯಾಸವನ್ನು ಕೂಡಾ ಮೈಗೂಡಿಸಿಕೊಂಡಿರುತ್ತಾರೆ. ಆದ್ರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಆದರೆ ಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಸಲ್ಫಾಕ್ಸೈಡ್‌ಗಳು ಕ್ರಿಯಾಶೀಲವಾಗುತ್ತವೆ. ಇದು ನಿಮ್ಮ ನರ ಕೋಶಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ವಿಶ್ರಾಂತಿಯ ಭಾವನೆಯು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ಈರುಳ್ಳಿ ತಿಂದರೆ ಮೆದುಳು ನಿರಾಳವಾಗುತ್ತದೆ.ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಅತಿಯಾದ ಯೋಚನೆಗಳು ಬಾರದಂತೆ ತಡೆಯುತ್ತದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮೂಲಕ,ಚೆನ್ನಾಗಿ ನಿದ್ದೆಗೆ ಜಾರಲು ಸಹಾಯ ಮಾಡುತ್ತದೆ.
ಆಕ್ಸಿಟಾಕ್ಸಿನ್‌ಗಳಂತಹ ಹಾರ್ಮೋನುಗಳ ಮಟ್ಟವನ್ನು ಸಮತೋಲನಗೊಳಿಸಬಹುದು. ಇದು ಹಾರ್ಮೋನ್ ಅಸಮತೋಲನದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ .
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.