ಈರುಳ್ಳಿಯನ್ನು ಹೀಗೆ ಸೇವಿಸಿ ಸಾಕು.. ಮೂಳೆಗಳ ನಡುವೆ ಅಂಟಿ ಕುಳಿತ ಯೂರಿಕ್ ಆಸಿಡ್ ಕರಗಿ ನೀರಾಗುವುದು !
ಈರುಳ್ಳಿ ಸೇವನೆಯಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಈರುಳ್ಳಿ ಕಡಿಮೆ ಪ್ಯೂರಿನ್ ಆಹಾರವಾಗಿದೆ. ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈರುಳ್ಳಿಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಕಾರಣದಿಂದಾಗಿ ಸಂಧಿವಾತ, ಕೀಲು ನೋವನ್ನು ತಡೆಯಲು ಈರುಳ್ಳಿ ಸಹಾಯ ಮಾಡುತ್ತದೆ.
ಯೂರಿಕ್ ಆಸಿಡ್ ಅಧಿಕವಾದಾಗ ಈರುಳ್ಳಿಯನ್ನು ಹಲವು ವಿಧಗಳಲ್ಲಿ ತಿನ್ನಬಹುದು. ಹಸಿ ಈರುಳ್ಳಿಯನ್ನು ತಿನ್ನುವುದು ಸಾಕಷ್ಟು ಪ್ರಯೋಜನ ನೀಡುತ್ತದೆ. ಇದನ್ನು ಸಲಾಡ್ ರೂಪದಲ್ಲಿಯೂ ತಿನ್ನಬಹುದು.
ಈರುಳ್ಳಿಯ ರಸವನ್ನು ಕುಡಿಯುವುದು ಯೂರಿಕ್ ಆಸಿಡ್ ಮಟ್ಟ ತಗ್ಗಿಸಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಪ್ಯೂರಿನ್ ಗಳನ್ನು ಜೀರ್ಣಿಸಿಕೊಳ್ಳಲು ಇದು ಸಹಕಾರಿ.
ಈರುಳ್ಳಿಯ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ, ಮೂಳೆಗಳ ನಡುವೆ ಸಿಲುಕಿದ ಹರಳುಗಳ ರೂಪದ ಯೂರಿಕ್ ಆಸಿಡ್ ಕರಗಿ ನೀರಾಗಿ ದೇಹದಿಂದ ಹೊರ ಹೋಗುತ್ತದೆ.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ. ಇದು ಮನೆಮದ್ದುಗಳನ್ನು ಆಧರಿಸಿದ್ದು ಚಿಕಿತ್ಸೆಗೆ ಪರ್ಯಾಯವಲ್ಲ. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.