ಕೂದಲುದುರುವಿಕೆ, ತಲೆಹೊಟ್ಟು, ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ ದಷ್ಟಪುಷ್ಟವಾದ ಕೂದಲಿಗಾಗಿ ಮನೆಯಲ್ಲೇ ತಯಾರಿಸಿ ಈರುಳ್ಳಿ ಎಣ್ಣೆ!
ಬದಲಾದ ಒತ್ತಡಭರಿತ ಜೀವನಶೈಲಿಯಲ್ಲಿ ಕೂದಲುದುರುವಿಕೆ, ತಲೆಹೊಟ್ಟು, ಅಕಾಲಿಕ ಬಿಳಿ ಕೂದಲು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಾಗಿವೆ.
ಆದರೆ, ನೀವು ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಬಹುದಾದ ಈರುಳ್ಳಿ ಎಣ್ಣೆಯ ಸಹಾಯದಿಂದ ಕೂದಲಿನ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಪಡೆಯಬಹುದು.
ವಾಸ್ತವವಾಗಿ ಕೂದಲಿನಲ್ಲಿರುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ದಟ್ಟವಾದ ಉದ್ದ ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿ ಆಗಿದೆ. ಹಾಗಾಗಿ ಕೂದಲ ಬೆಳವಣಿಗೆಗೆ ಈರುಳ್ಳಿ ಲಾಭದಾಯಕ ಎನ್ನಲಾಗುತ್ತದೆ.
ಈರುಳ್ಳಿ, ಕರಿಬೇವಿನ ಸೊಪ್ಪು, ಕೊಬ್ಬರಿ ಎಣ್ಣೆ ಅಥವಾ ನೀವು ಕೂದಲಿಗಾಗಿ ಬಳಸುವ ಯಾವುದಾದರೂ ಎಣ್ಣೆ.
ಒಂದು ಬಾಣಲೆಯಲ್ಲಿ ಅರ್ಧ ಕತ್ತರಿಸಿದ ಈರುಳ್ಳಿ, ತಾಜಾ ಕರಿಬೇವಿನ ಎಲೆಗಳು ಹಾಗೂ ಸ್ವಲ್ಪ ನೀರು ಸೇರಿಸಿ. ಕೊನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಬೆರೆಸಿ. ಐದರಿಂದ ಹತ್ತು ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಅದನ್ನು ಕಾಯಿಸಿ.
5-10 ನಿಮಿಷ ಹೆಚ್ಚು ಉರಿಯಲ್ಲಿ ಎಣ್ಣೆಯನ್ನು ಕಾಯಿಸಿದ ಬಳಿಕ, ಉರಿಯನ್ನು ಸಣ್ಣ ಮಾಡಿ ಎಣ್ಣೆ ಗಾಢ ಕಂದು ಬಣ್ಣಕ್ಕೆ ತಿರುಗುವವರೆಗೂ ಚೆನ್ನಾಗಿ ಕಾಯಿಸಿ.
ಈ ರೀತಿಯಾಗಿ ಚೆನ್ನಾಗಿ ಕಾಯಿಸಿದ ಬಳಿಕ ಬಾಣಲೆಯಲ್ಲಿ ತಯಾರಿಸಿದ ಎಣ್ಣೆಯನ್ನು ರಾತ್ರಿಯಿಡೀ ಅದರಲ್ಲೇ ಬಿಡಿ.
ಮರುದಿನ ಬೆಳಿಗ್ಗೆ ಎಣ್ಣೆಯನ್ನು ಶೋಧಿಸಿ ಗಾಜಿನ ಸೀಸಕ್ಕೆ ಹಾಕಿ ಇಟ್ಟರೆ, ಈರುಳ್ಳಿ ಆಯಿಲ್ ಬಳಸಲು ಸಿದ್ಧವಾಗಿದೆ.
ಈ ರೀತಿಯಾಗಿ ತಯಾರಿಸಿಟ್ಟ ಈರುಳ್ಳಿ ಎಣ್ಣೆಯನ್ನು ವಾರಕ್ಕೆರಡು ಬಾರಿ ಬುಡದಿಂದ ತುದಿಯವರೆಗೂ ಹಚ್ಚಿ ಮೂರು ಗಂಟೆಗಳ ಬಳಿಕ ಹೇರ್ ವಾಶ್ ಮಾಡುವುದರಿಂದ ಕೂದಲಿನ ಹಲವು ಸಮಸ್ಯೆಗಳನ್ನು ತಪ್ಪಿಸಬಹುದು. ಜೊತೆಗೆ, ದಟ್ಟ ಉದ್ದವಾದ ಕಪ್ಪು ಕೂದಲು ನಿಮ್ಮದಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.