ಅತಿಯಾದ ಕೂದಲು ಉದುರುವುವಿಕೆಗೆ ಪರಿಹಾರ ಈ ʼಎಣ್ಣೆʼ! ಹೀಗೆ ಬಳಸಿದ್ರೆ ಒಂದೇ ವಾರದಲ್ಲಿ ಮೊನಕಾಲುದ್ದು ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಏಕಾಏಕಿ ಕೂದಲು ಉದುರಿದಾಗ ಆಗುವ ನೋವು ಅವರ್ಣನೀಯ. ಈ ಸಂದರ್ಭದಲ್ಲಿ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸುವುದು ಬಹಳ ಮುಖ್ಯ. ನೀವು ದಿನನಿತ್ಯ ಬಳಸುವ ತೆಂಗಿನೆಣ್ಣೆಯಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ತೆಂಗಿನ ಎಣ್ಣೆಯಂತೆ ಈರುಳ್ಳಿ ಎಣ್ಣೆಯೂ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬುದು ನಿಮಗೆ ಗೊತ್ತೇ? ಹೌದು ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತೆಳ್ಳನೆಯ ಕೂದಲು ದಟ್ಟವಾಗುತ್ತದೆ. ಹಾಗಾದ್ರೆ ಈರುಳ್ಳಿ ಎಣ್ಣೆ ಮಾಡುವುದು ಹೇಗೆ?
ಈರುಳ್ಳಿ ಎಣ್ಣೆ ಮಾಡಲು, 200 ಗ್ರಾಂ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ. ಅದರ ನಂತರ, ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು 1 ದೊಡ್ಡ ನುಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಒಂದು ಕಪ್ ಕರಿಬೇವನ್ನು ಸೇರಿಸಿ.
ಈರುಳ್ಳಿ ಹುರಿದ ನಂತರ ನುಣ್ಣಗೆ ರುಬ್ಬಿಕೊಂಡು ಮತ್ತೆ ಅದೇ ಎಣ್ಣೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ತಣ್ಣಗಾಗಲು ಬಿಡಿ. ಅದರ ನಂತರ ಅದನ್ನು ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಎಣ್ಣೆಯನ್ನು ಹಿಂಡಿ. ಈ ಸಿದ್ಧಪಡಿಸಿದ ಈರುಳ್ಳಿ ಎಣ್ಣೆಯನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.
ಈರುಳ್ಳಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ದಟ್ಟವಾಗುತ್ತದೆ. ಕೂದಲು ಉದುರುವಿಕೆಯಿಂದ ಬಳಲುತ್ತಿರುವವರು ಈರುಳ್ಳಿ ಎಣ್ಣೆಯನ್ನು ಹಚ್ಚಬಹುದು. ಇದು ಉತ್ತಮ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಈರುಳ್ಳಿ ಎಣ್ಣೆಯು ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಈರುಳ್ಳಿ ಎಣ್ಣೆಯು ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು, ನೆತ್ತಿಯ ಮೇಲಿನ ಬ್ಯಾಕ್ಟೀರಿಯಾದ ಸೋಂಕನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.