ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಒಂದೇ ವಾರದಲ್ಲಿ ಕಪ್ಪಾಗಿ ಮಾರುದ್ದ ಬೆಳೆಯುವುದು!
ಈರುಳ್ಳಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸ್ಟ್ರಾಂಗ್ ಮತ್ತು ಆಕರ್ಷಕವಾಗುತ್ತದೆ. ಈರುಳ್ಳಿ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕೂದಲು ಬೆಳವಣಿಗೆಗೆ ಸಹಾಯಕವಾಗುವ ಈರುಳ್ಳಿ ಶಾಂಪೂ, ಈರುಳ್ಳಿ ಎಣ್ಣೆ ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದನ್ನು ಬಳಸಬಹುದು. ಅಥವಾ ಮನೆಯಲ್ಲಿಯೇ ಈರುಳ್ಳಿ ಎಣ್ಣೆಯನ್ನು ತಯಾರಿಸಬಹುದು.
ಈರುಳ್ಳಿ ಎಣ್ಣೆ ವಿಟಮಿನ್ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಕೂಡ ಇದರಲ್ಲಿ ಇರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್‌ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ
ಈರುಳ್ಳಿ ಎಣ್ಣೆಯಲ್ಲಿ ಕ್ವೆರ್ಸೆಟಿನ್ ಎಂಬ ಶಕ್ತಿಶಾಲಿ ಫ್ಲೇವನಾಯ್ಡ್ ಇದೆ. ಇವು ದೇಹದಲ್ಲಿಮ ಇತರ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಕೂದಲನ್ನು ಬೇರಿನಿಂದಲೇ ಬಲಪಡಿಸುತ್ತದೆ.
ಈರುಳ್ಳಿ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವುದು ಮಾತ್ರವಲ್ಲದೆ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸೇರಿದಂತೆ ಇತರ ಸೋಂಕುಗಳನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ಎಣ್ಣೆ ಮಾಡಲ ಮೊದಲು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ. ನಂತರ ಸ್ಟವ್ ಹೊತ್ತಿಸಿ ಪಾತ್ರೆಗೆ ತೆಂಗಿನ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಇದಕ್ಕೆ ಈರುಳ್ಳಿ ತುಂಡುಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಈರುಳ್ಳಿ ತುಂಡುಗಳ ಬಣ್ಣ ಬದಲಾಗುವವರೆಗೆ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆಯನ್ನು ತಣ್ಣಗಾಗಿಸಿ ಗಾಜಿನ ಬಾಟಲಿಯಲ್ಲಿ ಸೋಸಿ ಸಂಗ್ರಹಿಸಿ. ಈರುಳ್ಳಿ ಎಣ್ಣೆ ಮೆಂತ್ಯ ಕಾಳಿನ ಪುಡಿ ಬೆರೆಸಿ ತಲೆಗೆ ಹಚ್ಚಿ. ಇದರಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.