ಈ ತರಕಾರಿ ಸಿಪ್ಪೆಯನ್ನು ಸುಟ್ಟು ಕಿಟಕಿ, ಬಾಗಿಲ ಬಳಿ ಇಟ್ಟರೆ ಒಂದೇ ಒಂದು ಸೊಳ್ಳೆ ಮನೆಯೊಳಗೆ ನಿಲ್ಲುವುದಿಲ್ಲ! ಜಿರಳೆ ಕಾಟದಿಂದಲೂ ಸಿಗುವುದು ಮುಕ್ತಿ
ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಸಂಜೆಯಾಗುತ್ತಿದಂತೆ ಗುಯ್ಯಿ ಗುಡುತ್ತಾ ಮನೆಯೊಳಗೆ ಸೊಳ್ಳೆಗಳ ಪ್ರವೇಶ ಆಗುತ್ತದೆ.
ಸೊಳ್ಳೆಗಳ ಕಾಟ ತಪ್ಪಿಸಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಕ್ರೀಮ್,ಲೋಶನ್, ಕಾಯಿಲ್, ಎಲ್ಲವೂ ಸಿಗುತ್ತದೆ. ಆದರೆ ಇದರಿಂದ ಅಸ್ತಮಾ,ಅಲರ್ಜಿ, ಕೆಮ್ಮು ಮುಂತಾದ ಸಮಸ್ಯೆಗಳು ಶುರುವಾಗುವ ಅಪಾಯವೂ ಇದೆ.
ಇದರ ಬದಲು ಸೊಳ್ಳೆಗಳನ್ನು ಓಡಿಸಲು ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸಬಹುದು. ಬಿರಿಯಾನಿ ಎಲೆ ಮತ್ತು ಈರುಳ್ಳಿ ಸಿಪ್ಪೆಗಳನ್ನು ಒಟ್ಟಿಗೆ ಸುಡುವ ಮೂಲಕ ಸೊಳ್ಳೆಗಳನ್ನು ಮನೆಯಿಂದ ದೂರ ಇಡಬಹುದು.
ಬಿರಿಯಾನಿ ಎಲೆ ಮತ್ತು ಈರುಳ್ಳಿ ಸಿಪ್ಪೆಯನ್ನು ಸುಟ್ಟಾಗ ಹೊರ ಬರುವ ಗಾಢವಾದ ಪರಿಮಳವನ್ನು ಸೊಳ್ಳೆಗಳು ಸಹಿಸಿಕೊಳ್ಳುವುದಿಲ್ಲ. ಹಾಗಾಗಿ ಸೊಳ್ಳೆಗಳು ಇದರ ಪರಿಮಳ ಹೊರ ಬರುತ್ತಿದ್ದ ಹಾಗೆ ಮನೆಯಿಂದ ಹೊರಗೆ ಹಾರುತ್ತವೆ.
ರಾತ್ರಿ ಮಲಗುವ ಕೊನೆಯಲ್ಲಿ ಬಿರಿಯಾನಿ ಎಲೆಯನ್ನು ಮಾತ್ರ ಸುಟ್ಟರೆ ಸುವಾಸನೆ ಕೂಡಾ ಅದ್ಭುತವಾಗಿರುತ್ತದೆ. ಜೊತೆಗೆ ಒಂದೇ ಒಂದು ಸೊಳ್ಳೆ ಕೋಣೆಯಲ್ಲಿ ಉಳಿಯುವುದಿಲ್ಲ.
ಇನ್ನು ಬಿರಿಯಾನಿ ಎಲೆಯನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಅಡುಗೆ ಮನೆಯಲ್ಲಿ ಅಲ್ಲಲ್ಲಿ ಸ್ಪ್ರೇ ಮಾಡಿದರೆ ಜಿರಳೆಗಳ ಕಾಟ ಕೂಡಾ ತಪ್ಪುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ