ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆ ಜೊತೆ ಬೆರೆಸಿ ಹಚ್ಚಿದರೆ.. ಬಿಳಿ ಕೂದಲು 10 ನಿಮಿಷದಲ್ಲಿ ಕಪ್ಪಾಗಿ, ರೇಷ್ಮೆಯ ನೂಲಿನಂತಾಗುವುದು!
ಈರುಳ್ಳಿ ಜೊತೆಗೆ ಅದರ ಸಿಪ್ಪೆಯೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಈರುಳ್ಳಿ ಸಿಪ್ಪೆಯನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ಉಪಯೋಗಗಳಿವೆ. ಬಿಳಿ ಕೂದಲನ್ನು ಸುಲಭವಾಗಿ ಮತ್ತು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಈರುಳ್ಳಿ ಸಿಪ್ಪೆಯನ್ನು ಅಲೋವೆರಾ ಜೆಲ್ ಜೊತೆಗೆ ಬೆರೆಸಿ ತಲೆಗೆ ಹಚ್ಚಬೇಕು. ಈರುಳ್ಳಿ ಸಿಪ್ಪೆಯನ್ನು ಒಣಗಿಸಿ ಅವುಗಳನ್ನು ಪುಡಿಮಾಡಿ ಶೇಖರಿಸಿಡಿ. ಈಗ ಈ ಪುಡಿಯನ್ನು ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಅದನ್ನು ಕೂದಲಿಳಿಗೆ ಸಂಪೂರ್ಣವಾಗಿ ಹಚ್ಚಿ. 20 - 30 ನಿಮಿಷ ಒಣಗಲು ಬಿಡಿ. ಬಳಿಕ ಸೌಮ್ಯವಾದ ಶಾಂಪೂವಿನಿಂದ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ.
ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ. ನೀರು ತಣ್ಣಗಾದ ನಂತರ ಈ ನೀರನ್ನು ಕೂದಲಿನ ಬೇರುಗಳು ಮತ್ತು ತುದಿಗಳಿಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಸುಮಾರು 30 ನಿಮಿಷಗಳ ಕಾಲ ಬಿಡಿ. ನಂತರ, ಕೂದಲನ್ನು ತೊಳೆದು ಸ್ವಚ್ಛಗೊಳಿಸಿ. ಇದು ನಿಮ್ಮ ಕೂದಲನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ಸಿಪ್ಪೆಯ ಪುಡಿ ಬೆರೆಸಿ. ರಾತ್ರಿ ಮಲಗುವಾಗ ಬಿಳಿ ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಬೆಳಗೆದ್ದು ತಲೆಸ್ನಾನ ಮಾಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡಿದರೆ ಕೂದಲು ಕಪ್ಪಾಗುವುದು. ಅಲ್ಲದೇ, ತಲೆಹೊಟ್ಟು ಸಹ ತೊಲಗುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.