White Hair Remedy : ಈ ತರಕಾರಿಯಲ್ಲ ಇದರ ಸಿಪ್ಪೆಯೇ ಸಾಕು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು
ನಿರುಪಯುಕ್ತವೆಂದು ಪರಿಗಣಿಸಿ ಬಿಸಾಡುವ ಈರುಳ್ಳಿ ಸಿಪ್ಪೆ ಕೂಡಾ ನಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿ. ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಇದು ಸಹಾಯ ಮಾಡುತ್ತದೆ.
ಅಲೋವೆರಾ ಜೆಲ್ ಜೊತೆಗೆ ಈರುಳ್ಳಿ ಸಿಪ್ಪೆಯನ್ನು ಬೆರೆಸಿ ಕೂದಲಿಗೆ ಲೇಪಿಸಬೇಕು. ಇದಕ್ಕಾಗಿ, ಈರುಳ್ಳಿ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಕೊಳ್ಳಿ. ಈ ಪುಡಿಯನ್ನು ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿನ ಬುಡದಿಂದ ತುದಿವರೆಗೆ ಹಚ್ಚಬೇಕು. ಇದು ಸಂಪೂರ್ಣ ಒಣಗಿದ ಮೇಲೆ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ.
ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.ನೀರು ತಣ್ಣಗಾದ ನಂತರ, ಈ ನೀರನ್ನು ಕೂದಲಿನ ಬೇರಿನಿಂದ ತುದಿವರೆಗೆ ಹಚ್ಚಿ, 30 ನಿಮಿಷಗಳವರೆಗೆ ಬಿಡಿ.ನಂತರ, ಕೂದಲನ್ನು ತೊಳೆದು ಸ್ವಚ್ಛಗೊಳಿಸಿ.
ನಿಮ್ಮ ಕೂದಲನ್ನು ಬೇರುಗಳಿಂದಲೇ ಕಪ್ಪಾಗಿಸಲು ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ಸಿಪ್ಪೆಯನ್ನು ಬೆರೆಸಿ ಹಚ್ಚಬೇಕು.ಇದಕ್ಕಾಗಿ ಈರುಳ್ಳಿ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ನಂತರ ತೆಂಗಿನೆಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ