ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !
ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಕೂಡ ಉಪಯುಕ್ತವಾಗಿದೆ.
ನಿರುಪಯುಕ್ತ ಎಂದು ಬಿಸಾಡುವ ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯ ಜೊತೆ ಬೆರೆಸಿ ಬಳಸುವುದರಿಂದ ಉದ್ದ ಕಪ್ಪು ದಪ್ಪ ಕೂದಲನ್ನು ಪಡೆಯಬಹುದಾಗಿದೆ.
ಈರುಳ್ಳಿ ಸಿಪ್ಪೆಯನ್ನು ಬಳಸಿ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಬಹುದು. ಅಲ್ಲದೇ ತಲೆಹೊಟ್ಟು ಸಮಸ್ಯೆ ಸಹ ಗುಣವಾಗುತ್ತದೆ.
ಈರುಳ್ಳಿ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಬೇಕು. ಈರುಳ್ಳಿ ಸಿಪ್ಪೆಯ ಪುಡಿಯನ್ನು ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಬೇಕು. ಈ ಪೇಸ್ಟ್‌ನ್ನು ಕೂದಲಿನ ಬೇರಿನಿಂದ ತುದಿವರೆಗೆ ಹಚ್ಚಿಕೊಂಡು ಒಣಗಲು ಬಿಡಬೇಕು. ಬಳಿಕ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ.
ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ. ತಣ್ಣಗಾದ ನಂತರ ಕೂದಲಿನ ಬೇರು ಮತ್ತು ತುದಿಗಳಿಗೆ ಹಚ್ಚಿಕೊಂಡು, ಸುಮಾರು 30 ನಿಮಿಷಗಳ ಕಾಲ ಬಿಡಿ. ತಲೆಸ್ನಾನ ಮಾಡಿ. ಇದು ಸಹ ಕೂದಲು ಕಪ್ಪಾಗಿರಲು ಸಹಾಯಕವಾಗಿದೆ.
ಈರುಳ್ಳಿ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟು ಕೊಳ್ಳಿ. ತೆಂಗಿನೆಣ್ಣೆಯಲ್ಲಿ ಈರುಳ್ಳಿ ಸಿಪ್ಪೆ ಪುಡಿ ಬೆರೆಸಿ ಕೂದಲಿಗೆ ಬೇರಿನಿಂದ ತುದಿವರೆಗೆ ಹಚ್ಚಿ ಮಸಾಜ್ ಮಾಡಿ. ಇದು ಬಿಳಿ ಕೂದಲನ್ನು ಕ್ರಮೇಣ ಕಪ್ಪಾಗಿಸುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.