ಈರುಳ್ಳಿಯನ್ನು ಹೀಗೆ ಸೇವಿಸಿದರೆ ಕಲ್ಲು ಕಟ್ಟಿರುವ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರ ಹೋಗುವುದು!ಊತ, ಕೀಲುನೋವಿಗೂ ಇದು ಪರಿಹಾರ

Mon, 22 Apr 2024-10:11 am,

ಕೆಲವು ಮನೆಮದ್ದುಗಳ ಸಹಾಯದಿಂದ ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಬಹುದು.ಯೂರಿಕ್ ಆಸಿಡ್ ಅನ್ನು ಕರಗಿಸಲು ಸಾಮರ್ಥ್ಯ ಇರುವ ಮನೆ ಮದ್ದುಗಳಲ್ಲಿ ಒಂದು ಈರುಳ್ಳಿ. 

ರಕ್ತದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ತುಂಬಾ ಪ್ರಯೋಜನಕಾರಿ. ಆದರೆ ಕೀಲುಗಳಲ್ಲಿ ಹರಳಿನಂತೆ ಗಟ್ಟಿ ಕಟ್ಟಿ ಕುಳಿತಿರುವ   ಯೂರಿಕ್ ಆಸಿಡ್‌ ಅನ್ನು ಕರಗಿಸಲು ಈರುಳ್ಳಿಯನ್ನು ಹೇಗೆ ಸೇವಿಸಬೇಕು ಎನ್ನುವುದು ಕೂಡಾ ತಿಳಿದಿರಬೇಕು.   

ಈರುಳ್ಳಿ ಕಡಿಮೆ ಪ್ಯೂರಿನ್ ಆಹಾರವಾಗಿದ್ದು,ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಅಲ್ಲದೆ ಇದು ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಅನ್ನು ಹೊಂದಿರುತ್ತದೆ.ಇದು ಕೀಲುಗಳಲ್ಲಿ ಕಾಣಿಸಿಕೊಳ್ಳುವ ಊತ ಮತ್ತು ನೋವನ್ನು ತಡೆಯಲು ಸಹಾಯ ಮಾಡುತ್ತದೆ.  

ಈರುಳ್ಳಿಯಲ್ಲಿ ಜೀವಸತ್ವಗಳು, ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್, ಫೋಲೇಟ್ ಮತ್ತು ರಂಜಕದಂತಹ ಪೋಷಕಾಂಶಗಳು  ಕಂಡುಬರುತ್ತವೆ.ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುವುದರಿಂದ ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು, ಈರುಳ್ಳಿಯನ್ನು ಹಲವು ವಿಧಗಳಲ್ಲಿ ಸೇವಿಸಬಹುದು.ಆದರೆ ಇದನ್ನು  ಹಸಿಯಾಗಿಯೇ ತಿನ್ನಬೇಕು ಅಥವಾ ಹಾಗೆಯೇ ನೀರಿನಲ್ಲಿ ಹಾಕಿ ಒಂದು ಕುದಿ ಬರಿಸಿ ತಿನ್ನಬೇಕು. ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಬೇಕಾದರೂ ಕುಡಿಯಬಹುದು.   

ಹೀಗೆ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ಕರಗುತ್ತದೆ. ಇದರ ಸೇವನೆಯು ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ಸಮಸ್ಯೆಯಲ್ಲೂ ಪ್ರಯೋಜನಕಾರಿಯಾಗಿದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link