ಬಿಳಿ ಕೂದಲನ್ನು ಬುಡದಿಂದಲೂ ಕಪ್ಪಾಗಿಸುತ್ತೆ ಈರುಳ್ಳಿ, ಜಸ್ಟ್ ಹೀಗೆ ಬಳಸಿ..!
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಹೇರ್ ಡೈಗಳು ಲಭ್ಯವಿವೆ. ಆದರೆ, ಇವುಗಳ ಬಳಕೆ ತಕ್ಷಣದ ಪರಿಹಾರವನ್ನಷ್ಟೇ ನೀಡಬಲ್ಲದು.
ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲಿಗೆ ಶಾಶ್ವತವಾದ ಪರಿಹಾರವನ್ನು ಪಡೆಯಬಹುದು.
ಈರುಳ್ಳಿ ಬಳಕೆಯು ಕೂದಲಿನ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾಗಿಯಾಗಿದೆ. ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಕಾಲಜನ್ ಉತ್ಪಾದಿಸುತ್ತದೆ. ಕೂದಲಿನ ಕಿರುಚೀಲಗಳಿಗೆ ರಕ್ತಪರಿಚಲನೆ ಹೆಚ್ಚಿಸಿ ಬುಡದಿಂದಲೂ ಕೂದಲನ್ನು ಬಲಪಡಿಸುತ್ತದೆ.
ಕೂದಲು ಉದುರುವಿಕೆ ಸಮಸ್ಯೆಗೆ ಈರುಳ್ಳಿ ಎಣ್ಣೆ ಬಳಕೆಯು ಅತ್ಯುತ್ತಮ ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
ಈರುಳ್ಳಿ ಪೇಸ್ಟ್ ತಯಾರಿಸಿ ಕೂದಲಿಗೆ ಹೇರ್ ಮಾಸ್ಕ್ ರೀತಿ ಬಳಸಿ ಒಂದು ಗಂಟೆ ಬಳಿಕ ತಣ್ಣೀರಿನಿಂದ ಹೇರ್ ವಾಶ್ ಮಾಡುವುದರಿಂದ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.