ಕೀಲುಗಳಲ್ಲಿನ ಯುರಿಕ್ ಆಸಿಡ್ ಕರಗಿಸಲು ಹಸಿ ಈರುಳ್ಳಿಗೆ ಇದನ್ನು ಬೆರೆಸಿ ತಿನ್ನಿ.. ಕಿಡ್ನಿ ಸ್ಟೋನ್ ಹೊರಬರಲು ಇದೊಂದೇ ರಾಮಬಾಣ!
ಈರುಳ್ಳಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಿಗುವ ತರಕಾರಿ. ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಈರುಳ್ಳಿ ಜೊತೆ ಬೆಲ್ಲವನ್ನು ಬೆರೆಸಿ ಸೇವಿಸಿದರೆ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ಕ್ವೆರ್ಸೆಟಿನ್, ವಿಟಮಿನ್ ಎ, ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ.
ಬೆಲ್ಲವು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ತಾಮ್ರ ಮತ್ತು ಸತು ಮತ್ತು ವಿಟಮಿನ್ ಬಿ ಯಂತಹ ಅಗತ್ಯ ಖನಿಜಗಳನ್ನು ಹೊಂದಿರುತ್ತದೆ.
ಈರುಳ್ಳಿ ಮತ್ತು ಬೆಲ್ಲವನ್ನು ಒಟ್ಟಿಗೆ ಬೆರೆಸಿ ತಿನ್ನುವುದರಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಕೀಲುಗಳಲ್ಲಿ ಹರಳಿನ ರೂಪದಲ್ಲಿ ಶೇಖರಣೆಗೊಳ್ಳುವ ಯುರಿಕ್ ಆಸಿಡ್ ಅನ್ನು ಕರಗಿಸಲು ಈರುಳ್ಳಿ ಪ್ರಯೋಜನಕಾರಿಯಾಗಿದೆ.
ಈರುಳ್ಳಿ ಜೊತೆ ಬೆಲ್ಲ ಬೆರೆಸಿ ತಿಂದಾಗ ಮೂಳೆಗಳಿಗೆ ಶಕ್ತಿ ದೊರೆಯುತ್ತದೆ. ಜೊತೆಗೆ ಕೀಲು ನೋವು ಗುಣವಾಗುತ್ತದೆ.
ಈರುಳ್ಳಿ ಕಿಡ್ನಿ ಸ್ಟೋನ್‌ಪುಡಿ ಮಾಡುವ ಶಕ್ತಿ ಹೊಂದಿದೆ. ಇದನ್ನು ಬೆಲ್ಲದ ಜೊತೆ ತಿಂದಾಗ ಕಿಡ್ನಿ ಆರೋಗ್ಯ ಸುಧಾರಿಸುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ದೂರವಾಗುತ್ತದೆ.
ಸೂಚನೆ: ಇದು ಕೇವಲ ಮನೆಮದ್ದುಗಳನ್ನು ಆಧರಿಸಿದ ಲೇಖನವಾಗಿದೆ. ವೈದ್ಯರನ್ನು ಸಂಪರ್ಕಿಸಿದ ಬಳಿಕವೇ ಪಾಲಿಸುವುದು ಉತ್ತಮ. Zee Kannada News ಇದಕ್ಕೆ ಯಾವ ರೀತಿಯಲ್ಲೂ ಹೊಣೆಯಲ್ಲ.