Online Shopping Sale: ಟಾಪ್ ಬ್ರಾಂಡ್ ಗಳ ಮೇಲೆ ಸಿಗಲಿದೆ ಬಂಪರ್ ಆಫರ್, ಈ ದಿನಾಂಕಗಳಲ್ಲಿ ನಡೆಯಲಿದೆ ಡಿಸ್ಕೌಂಟ್ ಸೇಲ್

Wed, 30 Jun 2021-1:10 pm,

ವಿಶ್ವದ ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್‌ನ ಭಾರತೀಯ ಘಟಕವಾದ ಅಮೆಜಾನ್ ಇಂಡಿಯಾ ತನ್ನ ಗ್ರಾಹಕರಿಗೆ ಆಗಾಗ ಆಫರ್ ಗಳನ್ನು ನೀಡುತ್ತಿರುತ್ತದೆ. ಮತ್ತೊಮ್ಮೆ ಅಮೆಜಾನ್ ಜುಲೈನಲ್ಲಿ ಬಂಪರ್ ಸೇಲ್ ತರುತ್ತಿದೆ. Small Business Days Sale ಜುಲೈ 2 ರಿಂದ ಜುಲೈ 4, ರವರೆಗೆ ನಡೆಯಲಿದೆ. 

ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಜುಲೈ 1 ರಿಂದ ಜುಲೈ 3, 2021 ರವರೆಗೆ ಸೇಲ್ ಆರಂಭಿಸುತ್ತಿದೆ. ಕಂಪನಿಯು ಇದನ್ನು ಫ್ಲಿಪ್‌ಕಾರ್ಟ್ ಸೂಪರ್ ಸೇವರ್ ಡೇಸ್ ಸೇಲ್ ಎಂದು ಹೆಸರಿಸಿದೆ. ಇದಲ್ಲದೆ ಜುಲೈ 11 ರಂದು Flipkart Mobiles Sale ಲೈವ್ ನಡೆಯಲಿದೆ. 

ಫ್ಯಾಷನ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ, ಮಿಂತ್ರಾ (Fashion Sale on Myntra)  ಬಂಪರ್ ಸೇಲ್ ತರುತ್ತಿದೆ. ಮಾರಾಟದೊಂದಿಗೆ ಮಿಂತ್ರಾ ಡಾಟ್ ಕಾಮ್ ಫ್ಯಾಶನ್ ಉತ್ಪನ್ನಗಳನ್ನು ಮಾರಾಟ ಮಾಡುವ ಆನ್‌ಲೈನ್ ಸೈಟ್ ಆಗಿದೆ. ಮುಂದಿನ ತಿಂಗಳು ಇದು ಎಂಡ್ ಆಫ್ ರೀಜನ್ ಸೇಲ್ ನಡೆಸುತ್ತಿದೆ.  ಈ ಸೇಲ್ ಜುಲೈ 3 ರಿಂದ 8 ರವರೆಗೆ ನಡೆಯಲಿದೆ. ಇದರಲ್ಲಿ ನೀವು 50 ರಿಂದ 80 ಪ್ರತಿಶತದಷ್ಟು ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ಶೇಕಡಾ 12 ರಷ್ಟು ತ್ವರಿತ ರಿಯಾಯಿತಿ ಕೂಡಾ ಸಿಗಲಿದೆ. 

ಸ್ಟೈಲಿಶ್ ಡ್ರೆಸ್ ಮತ್ತು ಫುಟ್ ವೇರ್ ಗಳಿಗಾಗಿಯೇ ಹೆಸರುವಾಸಿಯಾಗಿರುವ ajio.com  ಕೂಡಾ ಆಫರ್ ಸೇಲ್ ನಡೆಸಲಿದೆ. Ajio BIG BOLD SALE  ಜುಲೈ 1 ರಿಂದ 5 ರವರೆಗೆ ajio.comನಲ್ಲಿ  ನಡೆಯಲಿದೆ. ಇದರಲ್ಲಿ, ಫ್ಯಾಶನ್ ಬ್ರಾಂಡ್‌ಗಳು 50 ರಿಂದ 90 ಪ್ರತಿಶತದಷ್ಟು ರಿಯಾಯಿತಿ ದರದಲ್ಲಿ ಸಿಗಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link