ಕೇವಲ ಹಿಂದೂಗಳು ಮಾತ್ರ ಈ 6 ದೇವಾಲಯಗಳಿವೆ ಭೇಟಿ ನೀಡಬಹುದು..! ಇತರರಿಗೆ ಪ್ರವೇಶ ನಿಷೇಧ

Thu, 01 Feb 2024-5:19 pm,

ಪ್ರತಿ ವರ್ಷ ಲಕ್ಷಾಂತರ ಜನರು ಜಗನ್ನಾಥ ಪುರಿಗೆ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಹಿಂದೂಯೇತರರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಧರ್ಮನಿಷ್ಠ ಹಿಂದೂಗಳಿಗೆ ಮಾತ್ರ ಇಲ್ಲಿಗೆ ಭೇಟಿ ನೀಡಲು ಅವಕಾಶವಿದೆ. ಅಷ್ಟೇ ಅಲ್ಲ ಈ ದೇವಸ್ಥಾನಕ್ಕೆ ವಿದೇಶಿ ಪ್ರವಾಸಿಗರ ಪ್ರವೇಶವನ್ನೂ ನಿಷೇಧಿಸಲಾಗಿದೆ.    

ಚೆನ್ನೈನ ಮಲಯಪುರದಲ್ಲಿರುವ ಕಪಾಲೇಶ್ವರ ದೇವಸ್ಥಾನದಲ್ಲಿ ಹಿಂದೂಯೇತರರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಇದು 17ನೇ ಶತಮಾನದ ಐತಿಹಾಸಿಕ ದೇವಾಲಯವಾಗಿದೆ. ದ್ರಾವಿಡ ನಾಗರಿಕತೆಯ ಈ ಶಿವ ದೇವಾಲಯಕ್ಕೆ ಹಿಂದೂಗಳು ಮಾತ್ರ ಭೇಟಿ ನೀಡಬಹುದು. ಅಲ್ಲದೆ, ವಿದೇಶಿ ಪ್ರವಾಸಿಗರ ಭೇಟಿಯನ್ನೂ ಸಹ ನಿಷೇಧಿಸಲಾಗಿದೆ.   

ಗುರುವಾಯೂರ್ ದೇವಾಲಯವು ಕೇರಳದ ತ್ರಿಶೂರ್‌ನಲ್ಲಿದೆ. ಈ ದೇವಾಲಯ 5000 ವರ್ಷಗಳಷ್ಟು ಇತಿಹಾಸ ಹೊಂದಿದೆ. ಶ್ರೀಕೃಷ್ಣ ಮತ್ತು ವಿಷ್ಣು ಈ ದೇವಾಲಯದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವಾಲಕ್ಕೆ ಹಿಂದೂಯೇತರ ಪ್ರವೇಶ ನಿಷೇಧ, ಅಲ್ಲದೆ, ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ಇಲ್ಲ.  

ದೇಲವಾಡ ದೇವಾಲಯವು ರಾಜಸ್ಥಾನದ ಮೌಂಟ್ ಅಬುದಲ್ಲಿದೆ. ಈ ದೇವಾಲಯವು ಜೈನ ಧರ್ಮಕ್ಕೆ ಸಮರ್ಪಿತವಾಗಿದೆ. ಜೈನ ಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಈ ದೇವಾಲಯಕ್ಕೆ ಹಿಂದೂಯೇತರ ಪ್ರವೇಶವನ್ನು ನಿಷೇಧಿಸಲಾಗಿದೆ.  

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಹಿಂದೂಯೇತರರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ವಿದೇಶದಿಂದ ಬಂದವರು ಇಲ್ಲಿಗೆ ಪ್ರವೇಶ ಪಡೆಯುತ್ತಾರೆ. ಆದರೆ ಇಲ್ಲಿರುವ ಪವಿತ್ರ ಬಾವಿಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ.   

ಲಿಂಗರಾಜ ದೇವಾಲಯವು ಒಡಿಶಾದ ಭುವನೇಶ್ವರದಲ್ಲಿದೆ. ಈ ದೇವಾಲಯವನ್ನು ಹಿಂದೂಗಳು ಮಾತ್ರ ಪ್ರವೇಶಿಸಬಹುದು. ಈ ಹಿಂದೆ ವಿದೇಶಿ ಪ್ರವಾಸಿಗರಿಗೆ ಈ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು, ಆದರೆ 2012 ಅದನ್ನು ನಿಷೇಧಿಸಲಾಯಿತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link