ಈ ದಿನ ಪೊರಕೆ ಖರೀದಿಸಿದರೆ ಜೊತೆಯಲ್ಲಿಯೇ ಮನೆ ಪ್ರವೇಶ ಮಾಡುವುದು ದರಿದ್ರ !ಹೆಜ್ಜೆ ಹೆಜ್ಜೆಗೂ ಆಗುವುದು ಸಾಲ!ದೂರವಾಗುವುದು ಮಾನಸಿಕ ನೆಮ್ಮದಿ
ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಸಂಬಂಧಿಸಿದಂತೆ ವಿಶೇಷ ನಿಯಮಗಳನ್ನು ಹೇಳಲಾಗಿದೆ. ಪೊರಕೆ ಯಾವ ದಿನ ಖರೀದಿಸಬೇಕು, ಯಾವ ದಿನ ಖರೀದಿಸಬಾರದು, ಪೊರಕೆಯನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು ಎಲ್ಲಾ ನಿಯಮಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ.
ಸೋಮವಾರ ಪೊರಕೆ ಕೊಳ್ಳಬಾರದು.ಸೋಮವಾರದಂದು ಪೊರಕೆ ಖರೀದಿಸಿದರೆ, ಆರ್ಥಿಕ ನಷ್ಟವನ್ನು ಉಂಟುಮಾಡಬಹುದು.ಸಾಲದ ಸುಳಿಯಲ್ಲಿ ಸಿಲುಕಬೇಕಾಗಬಹುದು.
ಶನಿವಾರದಂದು ಕೂಡಾ ಪೊರಕೆಯನ್ನು ಖರೀದಿಸುವುದು ಮಂಗಳಕರವಲ್ಲ. ಶನಿವಾರ ಪೊರಕೆ ಖರೀದಿಸಿದರೆ ಲಕ್ಷ್ಮೀ ಮಾತ್ರವಲ್ಲ,ಶನಿದೇವರ ಕೋಪಕ್ಕೂ ಗುರಿಯಾಗಬೇಕಾಗಬಹುದು.
ಪೊರಕೆ ಖರೀದಿಸಲು ಹೇಳಿ ಮಾಡಿಸಿದ ದಿನ ಎಂದರೆ ಶುಕ್ರವಾರ ಅಥವಾ ಮಂಗಳವಾರ.ಈ ಎರಡು ದಿನ ಪೊರಕೆ ಖರೀದಿಸಿದರೆ ಪೊರಕೆ ಜೊತೆ ಅದೃಷ್ಟ ಲಕ್ಷ್ಮೀ ಕೂಡಾ ಮನೆ ಪ್ರವೇಶ ಮಾಡುತ್ತಾಳೆ.
ಶುಕ್ರವಾರ, ಮಂಗಳವಾರ, ಧನತ್ರಯೋದಶಿ, ಮತ್ತು ದೀಪಾವಳಿಯಂದು ಪೊರಕೆ ಖರೀದಿಸುವುದು ಅತ್ಯಂತ ಶುಭ. ಈ ದಿನಗಳಲ್ಲಿ ಪೊರಕೆ ಖರೀದಿಸಿದರೆ ಆರ್ಥಿಕವಾಗಿ ಸಮೃದ್ಧಿಯಾಗುವುದಂತೆ.
ಇನ್ನು ಮನೆಯೊಳಗೆ ತಂದ ಪೊರಕೆಯನ್ನು ಮನೆಯ ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿಯೇ ಇಡಬೇಕು.ಇದು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡುತ್ತದೆ. ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಪೊರಕೆಯನ್ನು ಇಡಬೇಡಿ.
ಅಲ್ಲದೆ ನಮ್ಮ ಮನೆಯಲ್ಲಿ ಬಳಸುವ ಪೊರಕೆ ಎಲ್ಲರ ಕಣ್ಣಿಗೆ ಬೀಳುವ ಜಾಗದಲ್ಲಿ ಕೂಡಾ ಇಡಬಾರದು.ಸರಿಯಾದ ದಿಕ್ಕಿನಲ್ಲಿ ಸರಿಯಾದ ಜಾಗದಲ್ಲಿ ಪೊರಕೆ ಇಡುವ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎದುರಾಗುವುದೇ ಇಲ್ಲ.
ಸೂಚನೆ : ಮೇಲಿನ ಲೇಖನವನ್ನು ಧಾರ್ಮಿಕ ನಂಬಿಕೆ ಮತ್ತು ಮಾಹಿತಿ ಆಧಾರದ ಮೇಲೆ ಬರೆಯಲಾಗಿದೆ. ZEE KANNADA NEWS ಇದನ್ನು ಅನುಮೊದಿಸುವುದಿಲ್ಲ.