ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್ ಟ್ರೋಫಿ ಗೆದ್ದಿದ್ದು ಕೇವಲ ಎರಡೇ ತಂಡ: ಯಾವುದದು ಗೊತ್ತಾ?
ICC ODI ವಿಶ್ವಕಪ್ ಗೆಲ್ಲುವುದು ಪ್ರತೀ ಕ್ರಿಕೆಟ್ ತಂಡಕ್ಕೆ ಹಿರಿಮೆ ಎಂದು ಪರಿಗಣಿಸಲಾಗಿದೆ. 1975ರ ಮೊದಲ ಆವೃತ್ತಿಯಿಂದ ಆರಂಭವಾಗಿ, ಕಳೆದ 48 ವರ್ಷಗಳಲ್ಲಿ ಕೇವಲ ಐದು ತಂಡಗಳು ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್ ಟ್ರೋಫಿ ಗೆದ್ದ ತಂಡಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕೇವಲ ಎರಡು ತಂಡಗಳು ಮಾತ್ರ ಅಜೇಯರಾಗಿ ಪ್ರಶಸ್ತಿಯನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಗಿವೆ. ಅವುಗಳೆಂದರೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್.
ವೆಸ್ಟ್ ಇಂಡೀಸ್ 1975 ರಲ್ಲಿ ಇಂಗ್ಲೆಂಡ್’ನಲ್ಲಿ ಪ್ರಶಸ್ತಿ ಗೆದ್ದಾಗ ಮೊದಲ ODI ವಿಶ್ವಕಪ್ ವಿಜೇತರಾಗಿ ಹೊರಹೊಮ್ಮಿತು. ಕೆರಿಬಿಯನ್ ತಂಡವು ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿತ್ತು. ಕ್ಲೈವ್ ಲಾಯ್ಡ್ ತಂಡವು 1975ರ ವಿಶ್ವಕಪ್’ನಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿತ್ತು.
1979ರ ವಿಶ್ವಕಪ್’ನಲ್ಲಿಯೂ ಸಹ ವೆಸ್ಟ್ ಇಂಡೀಸ್ ಪ್ರಾಬಲ್ಯವನ್ನು ಮುಂದುವರೆಸಿತು. ಮತ್ತೊಮ್ಮೆ ಈ ತಂಡ ಅಜೇಯವಾಗಿ ಉಳಿದು ಪ್ರಶಸ್ತಿಯನ್ನು ಬಾಚಿಕೊಂಡಿತ್ತು.
ಆಸ್ಟ್ರೇಲಿಯಾ 2003ರಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಗ ಅಜೇಯ ODI ವಿಶ್ವಕಪ್ ಗೆದ್ದ ಎರಡನೇ ತಂಡವಾಯಿತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಸುದೀರ್ಘ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯವು 11 ಪಂದ್ಯಗಳನ್ನು ಎದುರಿಸಿ ಕಡೆಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.
2007ರಲ್ಲಿಯೂ ಸಹ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್’ನಂತೆಯೇ ಮತ್ತೊಮ್ಮೆ ಸೋಲನ್ನು ಅನುಭವಿಸದೆ ಏಕದಿನ ವಿಶ್ವಕಪ್ ಗೆದ್ದ ತಂಡವಾಗಿ ಹೊರಹೊಮ್ಮಿತು. ಕೆರಿಬಿಯನ್ ದ್ವೀಪದಲ್ಲಿ ಆಸ್ಟ್ರೇಲಿಯಾ ಈ ಸಾಧನೆಯನ್ನು ಮಾಡಿತ್.
ಅಂದಹಾಗೆ 1999 ಮತ್ತು 2003 ರಲ್ಲಿಯೂ ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದಿದ್ದು, ಸತತ ಮೂರನೇ ವಿಶ್ವಕಪ್ ಜಯವಾಗಿತ್ತು.