ನೀವೂ ಸೆಲ್ಫೀ ಪ್ರಿಯರೇ! Oppo ದ ಈ ಫೋನ್`ನಲ್ಲಿದೆ 25 MP ಫ್ರೆಂಟ್ ಕ್ಯಾಮರಾ
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 9 ಬಿಡುಗಡೆಯಾದ ನಂತರ, ಚೀನೀ ಸ್ಮಾರ್ಟ್ಫೋನ್ ತಯಾರಕ Oppo ತನ್ನ ಹೊಸ ಫೋನ್ Oppo F9 Pro ಅನ್ನು ಲಾಂಚ್ ಮಾಡಲು ಯೋಜಿಸುತ್ತಿದೆ. ಕಂಪನಿಯಿಂದ ಆಗಸ್ಟ್ 21 ರಂದು Oppo ಎಫ್ 9 ಪ್ರೊ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕಾಗಿ, ಕಂಪನಿಯು ಮಾಧ್ಯಮಗಳಿಗೆ ಆಹ್ವಾನ ನೀಡಿದೆ.
ಲಾಂಚ್ ಆಗುವ ಮೊದಲೇ ಈ ಫೋನಿನ ಫೀಚರ್ ಅನ್ನು ಕೆಲವು ವೆಬ್ಸೈಟ್ಗಳು ಬಹಿರಂಗಪಡಿಸಿವೆ. ಭಾರತದಲ್ಲಿ ಲಾಂಚ್ ಆಗುವ ಮೊದಲೇ ಅಂದರೆ ಆಗಸ್ಟ್ 15 ರಂದು ಈ ಫೋನ್ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕೆಲವು ವೆಬ್ಸೈಟ್ ಗಳು ನೀಡಿರುವ ಮಾಹಿತಿ ಪ್ರಕಾರ, ಎಫ್ 9 ಪ್ರೊ 6.3-ಇಂಚಿನ ಪೂರ್ಣ HD+ ಪ್ರದರ್ಶನವನ್ನು(display) ಹೊಂದಿದೆ. ಇದು 4 ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿದೆ.
ಇತ್ತೀಚೆಗೆ, ಕಂಪೆನಿಯು ಫೋನ್ನ ವರ್ಣದ ರೂಪಾಂತರಗಳ ಬಗ್ಗೆ ಮಾಹಿತಿ ನೀಡಿತು. ಈ ಫೋನ್ ಸನ್ರೈಸ್ ಕೆಂಪು, ಟ್ವಿಲೈಟ್ ಬ್ಲೂ ಮತ್ತು ಪರ್ಪಲ್ ಕಲರ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ವಿಶೇಷ ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, VOOC ಫಾಸ್ಟ್ ಚಾರ್ಜಿಂಗ್ ಬೆಂಬಲ ಆಯ್ಕೆಯು OPPO F9 Pro ನಲ್ಲಿ ಲಭ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
ಮಾಹಿತಿಯ ಪ್ರಕಾರ, Oppo ನ ಈ ಸ್ಮಾರ್ಟ್ ಫೋನ್ ಅತ್ಯಂತ ತೆಳುವಾದ ಅಂಚಿನ ಮತ್ತು ಪೂರ್ಣ-ಸ್ಕ್ರೀನ್ ಡಿಸ್ಪ್ಲೇ ಒದಗಿಸುತ್ತದೆ. ಈ ಫೋನ್ಗೆ 2.0 GHz ಮೀಡಿಯಾ ಟೆಕ್ ಹೆಲಿಯೋ P60 ಪ್ರೊಸೆಸರ್ ದೊರೆಯುತ್ತದೆ. ಫೋನ್ ಪ್ರಬಲವಾದ 3500mAh ಬ್ಯಾಟರಿಯನ್ನು ಹೊಂದಿದೆ, ಇದು ವೇಗದ ಚಾರ್ಜಿಂಗ್ಗೆ ಬೆಂಬಲ ನೀಡುತ್ತದೆ ಎನ್ನಲಾಗಿದೆ.
ಸೆಲ್ಪೀ ಇಷ್ಟಪಡುವ ಜನರಿಗಾಗಿ ಈ ಫೋನ್ ನಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಸೆಲ್ಫಿಗಾಗಿ 25 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ, ಅದು ಎಫ್/2.0 ದ್ಯುತಿರಂಧ್ರ(aperture)ದೊಂದಿಗೆ ಬರುತ್ತದೆ. ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸಲಾಗಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ನಲ್ಲಿ ಪ್ರಾಥಮಿಕ ಕ್ಯಾಮರಾ 16 MP ಮತ್ತು ದ್ವಿತೀಯ ಕ್ಯಾಮೆರಾ 2 MP ಕ್ಯಾಮರಾವನ್ನು ಹೊಂದಿರುತ್ತದೆ.
ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ Oppo F9 Pro ದರದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಒದಗಿಸಿಲ್ಲ. ಅದಾಗ್ಯೂ, ವಿಯೆಟ್ನಾಂನಲ್ಲಿ F9 ಮೌಲ್ಯವು VND 7,990,000 ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 23,500 ರೂ. ಆಗಿದೆ.