Oppo Reno8: ಭಾರತದಲ್ಲಿ ಒಪ್ಪೋ 8 ರೆನೋ ಸರಣಿ ಬಿಡುಗಡೆ, ಬೆಲೆ & ವೈಶಿಷ್ಟ್ಯಗಳನ್ನು ತಿಳಿಯಿರಿ

Tue, 19 Jul 2022-7:46 pm,

OPPO Reno8 Pro 5G ಸ್ಮಾರ್ಟ್‍ಪೋನ್ ಮೆರುಗುಗೊಳಿಸುವ ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. Gorilla Glass 5 backನೊಂದಿಗೆ ಸುವ್ಯವಸ್ಥಿತ Unibody Design ಮತ್ತು ಹೆಚ್ಚುವರಿ ಬಾಳಿಕೆಗಾಗಿ ಅಲ್ಯೂಮಿನಿಯಂ ಫ್ರೇಮ್ ಒಳಗೊಂಡಿದೆ. ಈ ಫೋನ್ ಅಕ್ಟಾ-ಕೋರ್ MediaTek ಡೈಮೆನ್ಸಿಟಿ 8100-MAX SoC ಪ್ರೊಸೆಸರ್ ಬಲವನ್ನು ಹೊಂದಿದೆ. 4500mAH ಸಾಮರ್ಥ್ಯದ ಬ್ಯಾಟಿರಿಯನ್ನು ಹೊಂದಿರುವ ಈ ಫೋನ್ 80W SUPERVOOC TM ಸೂಪರ್ ಫ್ಲ್ಯಾಶ್ ವೇಗದ ಚಾರ್ಚಿಂಗ್ ಬೆಂಬಲಿಸುತ್ತದೆ.

6.7 ಇಂಚಿನ ಫುಲ್ ಎಚ್‍ಡಿ+ಅಮೋಲೆಡ್ ಡಿಸ್‍ಪ್ಲೇಯನ್ನು ಹೊಂದಿದೆ. ಈ ಡಿಸ್‍ಪ್ಲೇ 1,080X2412 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನಿನ ಡಿಸ್‍ಪ್ಲೇ HDR10+ ಬೆಂಬಲ, SGS ಲೋ ಮೋಷನ್ ಬ್ಲರ್, SGS ಮೋ ಬ್ಲೂ ಲೈಟ್, ಅಮೆಜಾನ್ HDR ಪ್ರಮಾಣೀಕರಣ ಮತ್ತು ನೆಟ್‍ಫ್ಲಿಕ್ಸ್ HD ಪ್ರಮಾಣೀಕರವಣವನ್ನು ಹೊಂದಿದೆ. 256GB ಸ್ಟೋರೇಜ್, 12GB RAM ಹೊಂದಿರುವ ಈ ಫೋನ್  32MP ನ್ಯಾಪ್ ಕ್ಯಾಮೆರಾದೊಂದಿಗೆ 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ColorOS 12.1 OSನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

OPPO Reno 8 ಸ್ಮಾರ್ಟ್‍ಫೋನ್ 6.43 ಇಂಚಿನ FULL HD ಡಿಸ್‍ಪ್ಲೇ ಹೊಂದಿದೆ. ಈ ಡಿಸ್‍ಪ್ಲೇ 1,080X2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಒಳಗೊಂಡಿದೆ. ಆಕ್ಟಾ-ಕೋರ್ MediaTek ಡೈಮೆನ್ಸಿಟಿ 1300 Soc ಪ್ರೊಸೆಸರ್ ಬಲವನ್ನು ಹೊಂದಿರುತ್ತದೆ. ಇದು Android Color OS 12.1ರ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2ನೇ ಕ್ಯಾಮೆರಾ 2 ಮೆಗಾಪಿಕ್ಸೆಲ್  ಮ್ಯಾಕ್ರೋ ಕ್ಯಾಮೆರಾ ಮತ್ತು 3ನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಒಪ್ಪೋ ರೆನೋ 8 ಸ್ಮಾರ್ಟ್‍ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಈ ಸ್ಮಾರ್ಟ್‍ಫೋನ್ 8GB RAM+128GB ಸ್ಟೋರೇಜ್ ಆಯ್ಕೆಯೊಂದಿಗೆ ಲಭ್ಯವಿದೆ.

19 ಜುಲೈ 2022 ಅಂದರೆ ಇಂದಿನಿಂದ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿರುವ Reno8 Pro 5G ಸ್ಮಾರ್ಟ್‍ಫೋನ್ 45,999 ರೂ.ಗೆ ಲಭ್ಯವಿರುತ್ತದೆ. Reno8 5G ಸ್ಮಾರ್ಟ್‍ಫೋನ್‍ 25 ಜುಲೈ 2022 ರಿಂದ ಮಾರಾಟಕ್ಕೆ ಲಭ್ಯವಿರಲಿದ್ದು, 29,999 ರೂ. ದರ ನಿಗದಿಪಡಿಸಲಾಗಿದೆ. ಈ 2 ಉತ್ಪನ್ನಗಳು ಫ್ಲಿಪ್‌ಕಾರ್ಟ್, OPPO ಸ್ಟೋರ್‌ಗಳು ಮತ್ತು ಮುಖ್ಯ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತವೆ.

Reno8 ಸರಣಿಯ ಸ್ಮಾರ್ಟ್‍ಫೋನ್‍ ಜೊತೆಗೆ OPPO ಕಂಪನಿಯು OPPO Pad Air ಅನ್ನು ಬಿಡುಗಡೆಗೊಳಿಸಿದೆ. 4 GB+64GB ಆವೃತ್ತಿಗೆ 16,999 ರೂ. ಮತ್ತು 4GB +128GB ಆವೃತ್ತಿಗೆ 19,999 ರೂ. ಬೆಲೆ ನಿಗದಿಪಡಿಸಲಾಗಿದೆ ಬಿಡುಗಡೆ ಮಾಡಿದೆ. ಇದು OPPOದ ಮೊದಲ ಟ್ಯಾಬ್ಲೆಟ್ ಆಗಿದೆ. ಇದು AI ಸಿಸ್ಟಮ್ ಬೂಸ್ಟರ್ 2.1 ಮತ್ತು RAM ವಿಸ್ತರಣೆ ತಂತ್ರಜ್ಞಾನದೊಂದಿಗೆ Power-Efficient '6nm' ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಒಳಗೊಂಡಿರುವ ವಿಭಾಗದಲ್ಲಿ ಮೊದಲ ಸಾಧನವಾಗಿದೆ.  OPPO Tablet and OPPO Pad Air

ವಿಶೇಷಣಗಳು

10.36-ಇಂಚಿನ (2,000x1,200px) 2K IPS ಪರದೆ | Power-Efficient '6nm' ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ | 64/128GB ಸ್ಟೋರೇಜ್, 4GB RAM | ColorOS 12.1 ಹೊಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link