Surprising: ಕೋಟಿ ಬಾಳುವ ಮನೆಯಲ್ಲಿ ಉಚಿತವಾಗಿ ನೆಲೆಸುವ ಅವಕಾಶ, ಜೊತೆಗೆ ಸಿಗಲಿದೆ ಕೈ ತುಂಬಾ ಹಣ

Mon, 06 Sep 2021-8:16 pm,

ಕರೋನಾ ಲಾಕ್‌ಡೌನ್‌ನಿಂದಾಗಿ ತಿಂಗಳುಗಟ್ಟಲೆ ಮನೆಯಲ್ಲಿ ಬಂಧಿಯಾಗಿರುವ ಜನರಿಗೆ, ಇದೊಂದು ಸುವರ್ಣಾವಕಾಶವಾಗಲಿದೆ.  ಯುಕೆಯ ಈ ಭವ್ಯ  ಭವನದಲ್ಲಿ ಅತ್ಯಂತ ಆರಾಮದಾಯಕ ರಜಾದಿನಗಳನ್ನು ಉಚಿತವಾಗಿ ಕಳೆಯಬಹುದು.   

ದಿ ಸನ್ ವರದಿ ಪ್ರಕಾರ, ಈ ಭವ್ಯವಾದ ಭವನದಲ್ಲಿ ಒಬ್ಬ ವ್ಯಕ್ತಿ 3 ರಾತ್ರಿಗಳನ್ನು ಕಳೆದರೆ, 500 ಪೌಂಡ್ ಅಂದರೆ 50 ಸಾವಿರ ರೂಪಾಯಿ ಪಡೆಯಲಿದ್ದಾನೆ. ಈ ಭವನದ  ಹೆಸರು ಮ್ಯಾನರ್ ಹೌಸ್, ಇದರ ಒಳಭಾಗವು ತುಂಬಾ ಸುಂದರವಾಗಿರುತ್ತದೆ.  

ಈ ಮನೆಯಲ್ಲಿ ವಾಸಿಸುವ ವ್ಯಕ್ತಿಯು ಈಜುಕೊಳ ಮತ್ತು ಹಾಟ್ ಟಬ್ ಅನ್ನು ಉಚಿತವಾಗಿ ಬಳಸುವ ಸೌಲಭ್ಯವನ್ನೂ ಪಡೆಯುತ್ತಾನೆ. ರಾಯಲ್ ಬೆಡ್ ರೂಂನಲ್ಲಿ ಉಳಿಯುವ ಅವಕಾಶವಿರುತ್ತದೆ. ಈ ಭವನದಲ್ಲಿ 8 ಮಲಗುವ ಕೋಣೆಗಳಿವೆ. 

 ಈ ಮನೆಯಲ್ಲಿ ಉಳಿಯುವ ಸಲುವಾಗಿ ಹಣವನ್ನು ನೀಡಲಾಗುತ್ತಿದೆ. ಮ್ಯಾನ್ಶನ್‌ನಲ್ಲಿ ಉಳಿದುಕೊಳ್ಳುವ ವ್ಯಕ್ತಿಯು ಮೈ ಹೋಮ್ ಮೂವ್ ಕನ್ವೇಯಿಂಗ್ ಕಂಪನಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ. ಇದಕ್ಕಾಗಿ, ವ್ಯಕ್ತಿಯು ಈ ಭವನದಲ್ಲಿ ಸೆಪ್ಟೆಂಬರ್ 21 ರಿಂದ 23 ರ ನಡುವೆ ಇರಬೇಕಾಗುತ್ತದೆ. 

"ಹೊಸ ಮನೆಯನ್ನು ಖರೀದಿಸುವುದು ಒಬ್ಬ ವ್ಯಕ್ತಿಯ ಜೀವನದ ಅತಿ ದೊಡ್ಡ ಖರೀದಿಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಖರೀದಿದಾರನಿಗೆ ನಂಬಿಕಸ್ಥರ ಸಲಹೆ, ಮಾರ್ಗದರ್ಶನದ ಅಗತ್ಯವಿರುತ್ತದೆ. ಮ್ಯಾನ್ಷನ್ ಟೆಸ್ಟರ್ ಈ ಕೆಲಸದಲ್ಲಿ ಖರೀದಿದಾರರಿಗೆ  ಬಹಳಷ್ಟು ಸಹಾಯ ಮಾಡುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link