ಈ ಹಣ್ಣಿನ ರಸ ಕುಡಿಯಿರಿ.. ಕಣ್ಣಿನ ದೃಷ್ಟಿ ಮಂಕಾಗೋದೇ ಇಲ್ಲ! ವಯಸ್ಸು 60 ದಾಟಿದ್ರೂ ಕನ್ನಡಕವೂ ಬೇಕಿಲ್ಲ, ಪೊರೆಯೂ ಬರೋದಿಲ್ಲ
Orange Juice benefits: ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ವಯಸ್ಸಾದಂತೆ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಲು ಕಿತ್ತಳೆ ಹಣ್ಣು ಪ್ರಯೋಜನಕಾರಿಯಾಗಿದೆ. ಕಿತ್ತಳೆ ಸೇವಿಸುವುದರಿಂದ ದೃಷ್ಟಿ ದೋಷ ನಿವಾರಣೆಯಾಗಬಹುದು.
ಮ್ಯಾಕ್ಯುಲರ್ ಡಿಜನರೇಶನ್ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸ್ಥಿತಿಯಾಗಿದ್ದು ಇದರಿಂದ ಕಣ್ಣಿನ ದೃಷ್ಟಿ ಕ್ಷೀಣಿಸುತ್ತದೆ. ದಿನಕ್ಕೆ ಕನಿಷ್ಠ ಒಂದು ಕಿತ್ತಳೆ ಹಣ್ಣನ್ನು ತಿನ್ನುವ ಜನರು ಮ್ಯಾಕ್ಯುಲರ್ ಡಿಜೆನರೇಶನ್ ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು.
ಈ ಪರಿಣಾಮವು ಕಿತ್ತಳೆಯಲ್ಲಿರುವ ಫ್ಲೇವನಾಯ್ಡ್‌ಗಳ ಕಾರಣದಿಂದಾಗಿದೆ. ಇದು ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಫ್ಲೇವನಾಯ್ಡ್‌ಗಳು ಬಹುತೇಕ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿವೆ.
ಕಿತ್ತಳೆಯು ಕ್ಯಾರೊಟಿನಾಯ್ಡ್‌ಗಳ ಸಮೃದ್ಧ ಮೂಲವಾಗಿದೆ. ಇದರಲ್ಲಿರುವ ವಿಟಮಿನ್ ಎ ಕಣ್ಣಿನಲ್ಲಿರುವ ಲೋಳೆಯ ಪೊರೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆಯಿಂದ ವಯಸ್ಸಾದಂತೆ ಆಗುವ ಕಣ್ಣಿನ ನರಗಳ ಹಾನಿಯನ್ನು ತಡೆಯುತ್ತದೆ. ಇದರಿಂದಾಗಿ ವ್ಯಕ್ತಿಯು ಕುರುಡತನದಿಂದ ರಕ್ಷಣೆ ಪಡಯಬಹುದಾಗಿದೆ.
ಕಿತ್ತಳೆ ದೊಡ್ಡ ಪ್ರಮಾಣದಲ್ಲಿ B6 ವಿಟಮಿನ್ ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಣ್ಣಿನಲ್ಲಿರುವ ಹೆಸ್ಪೆರಿಡಿನ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕಿತ್ತಳೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಪಾಲಿಥೋಕ್ಸಿಲೇಟೆಡ್ ಫ್ಲೇವೊನ್‌ಗಳು ಕೊಲೆಸ್ಟ್ರಾಲ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.