ಯಾವುದೇ ಕಲರ್, ಹೇರ್ ಡೈ ಬೇಡ... ಈ ಆರ್ಗ್ಯಾನಿಕ್ ಹೇರ್ ಡೈ ಬಳಸಿ ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಿ...!
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ... ಹಾಗಿದ್ದರೆ, ಮನೆಯಲ್ಲಿರುವ ಅಕ್ಕಿ, ಈರುಳ್ಳಿಯನ್ನು ಬಳಸಿ ನಿಮ್ಮ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
ಬೆಳ್ಳಗಾಗಿರುವ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಲು ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ಆರ್ಗ್ಯಾನಿಕ್ ಹೇರ್ ಡೈ ತಯಾರಿಸಬಹುದು.
ಅಕ್ಕಿ ತೊಳೆದ ನೀರನ್ನು ಬಳಸಿ ನೀವು ಬಿಳಿ ಕೂದಲನ್ನು ಯಾವುದೇ ಅಡ್ಡಪರಿಣಾಮವಿಲ್ಲದೆ ಕಪ್ಪಾಗಿಸಬಹುದು.
ಒಂದು ಸ್ಪೂನ್ ಅಕ್ಕಿಗೆ ಮೂರ್ನಾಲ್ಕು ಸ್ಪೂನ್ ನೀರು ಹಾಕಿ ನೆನೆಸಿಡಿ. ಒಂದು ಸಣ್ಣ ಗಾತ್ರದ ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ತುರಿದು ಪೇಸ್ಟ್ ತಯಾರಿಸಿ. ಒಂದು ಶುದ್ಧ ಬಟ್ಟೆಯಿಂದ ತುರಿದ ಈರುಳ್ಳಿಯನ್ನು ಹಿಂಡಿ ರಸ ಬೇರ್ಪಡಿಸಿ.
ಮನೆಯಲ್ಲೇ ಆರ್ಗ್ಯಾನಿಕ್ ಹೇರ್ ಡೈ ತಯಾರಿಸಲು ಮೊದಲಿಗೆ 3 ಸ್ಪೂನ್ ನೆನೆಸಿಟ್ಟ ಅಕ್ಕಿ ನೀರನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ ಒಂದೂವರೆ ಚಮಚ ಈರುಳ್ಳಿ ರಸವನ್ನು ಹಾಕಿ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 1 ಸ್ಪೂನ್ ಇನ್ಸ್ಟಾಂಟ್ ಕಾಫಿಪುಡಿ ಹಾಕಿ ಬೆರೆಸಿ. ಬಳಿಕ ಅರ್ಧದಿಂದ ಮುಕ್ಕಾಲು ಚಮಚದಷ್ಟು ಶಾಂಪೂ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈ ರೀತಿಯಾಗಿ ನೀವು ಮನೆಯಲ್ಲಿಯೇ ತಯಾರಿಸಿದ ಆರ್ಗ್ಯಾನಿಕ್ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ. ಕೇವಲ ನಾಲ್ಕೇ ವಾರದಲ್ಲಿ ನಿಮ್ಮ ಬೆಳ್ಳಗಾಗಿರುವ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.