ನಮ್ಮ ನಡೆ ಮತಗಟ್ಟೆ ಕಡೆ: ಗ್ರಾಮೀಣ ಭಾಗದಲ್ಲೂ ಹಬ್ಬದ ಸಂಭ್ರಮ

Tue, 02 May 2023-2:08 am,

ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸುವ ಹಿನ್ನಲೆ ಇಂಚರಾ ಜಾಗೃತಿ ಕಲಾತಂಡದಿಂದ ಸಿದ್ದಾಪುರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಬೀದಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಬಸ್ ನಿಲ್ದಾಣ ಆವರಣದಲ್ಲಿರುವ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ಖಚಿತವಾಗಿ ಮತದಾನ ಮಾಡುವೆ ಎಂದು ಸಂತಸದಿಂದ ತಮ್ಮ ಸಹಿ ಮಾಡಿದರು.

ಮತದಾನದ ಗೀತೆಗಳನ್ನು ಪ್ರಚುರ ಪಡಿಸುವ ಮೂಲಕ ಗ್ರಾಮ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ನನ್ನ ಮತ ನನ್ನ ಆಯ್ಕೆ, ನನ್ನ ಮತ ನನ್ನ ಹಕ್ಕು ಎಂಬ ಘೋಷಣೆಯ ಚಿಟ್ಟೆ ಪೋಟೋ ಪ್ರೇಮ್‌ನಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆ ಸ್ವಸಹಾಯ ಗುಂಪು ಸದಸ್ಯರು ಪೋಟೋಗಳನ್ನು ತೆಗೆದುಕೊಂಡಿದ್ದು ವಿಶೇಷವಾಗಿ ಕಂಡು ಬಂದಿತು.

ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯ ಮಾದರಿ ಮತಗಟ್ಟೆ-149ರಲ್ಲಿ ಏಪ್ರೀಲ್ 30ರಂದು ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ ಎನ್. ಅವರು ಚಾಲನೆ ನೀಡಿದರು. ಬಳಿಕ ನಡೆದ ಕಾಲ್ನಡಿಗೆ ಜಾಥಾದಲ್ಲಿ ಜಾಗೃತಿ ಫಲಕಗಳನ್ನು ಹಿಡಿದು ಸಾಗಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಸಂಕನಾಳ, ತಾಪಂ ಐಇಸಿ ಸಂಯೋಜಕ ಚಂದ್ರಶೇಖರ್ ಹಿರೇಮಠ್, ಆರೋಗ್ಯ ಇಲಾಖೆ ಸಿಬ್ಬಂದಿ ಸಾವಿತ್ರಿ ಹಿರೇಮಠ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ, ಗ್ರಾಮ ಪಂಚಾಯತಿ ಸಿಬ್ಬಂದಿ ಶಕುಂತಲಾ ಕುಂಬಾರ, ಸಂಗಮ್ಮ, ಪರುಶುರಾಮ, ವೀರಯ್ಯ, ಮುದುಕಪ್ಪ ಹಾಗೂ ಕಾಯಕ ಬಂದುಗಳು ಮತ್ತು ಸಾರ್ವಜನಿಕರು ಇದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾಮ ಪಂಚಾಯತಿ ಪಿಡಿಓ ಅಬ್ದುಲ್ ಗಫಾರ್, ಗ್ರಾಮ ಪಂಚಾಯತಿ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಕಾಯಕ ಬಂಧುಗಳು, ಅಕುಶಲ ಕೂಲಿಕಾರರು, ಮತದಾರರು ಹಾಜರಿದ್ದರು.

ಕುಷ್ಟಗಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಚಳಿಗೇರಿ ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ನಡೆ ಮತಗಟ್ಟಿ ಕಡೆ ಕಾರ್ಯಕ್ರಮದಲ್ಲಿ ವಿನೂತನವಾಗಿ ಸೆಲ್ಫಿ ಸ್ಟ್ಯಾಂಡ್ ಹಾಗೂ ಸಹಿ ಸಂಗ್ರಹ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮಾಡಲಾಯಿತು.

ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಏಪ್ರೀಲ್ 30ರಂದು ನಡೆದ ನಮ್ಮ ನಡೆ ಮತಗಟ್ಟೆ ಕಡೆ ಬೃಹತ್ ಮತದಾನ ಜಾಗೃತಿಗೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹನುಮಂತಗೌಡ ಪಾಟೀಲ್ ಅವರು ಚಾಲನೆ ನೀಡಿದರು.

ಜಮಾಯಿಸಿದ್ದ ನೂರಾರು ಜನ ಮತದಾರರು ಬಣ್ಣ ಬಣ್ಣದಿಂದ ಕೂಡಿದ್ದ ತಮ್ಮೂರ ಮತಗಟ್ಟೆ ನೋಡಿ ಹರ್ಷ ವ್ಯಕ್ತಪಡಿಸಿದರು. ನಾವು ಮತದಾನ ಮಾಡುತ್ತೇವೆ. ನೀವು ತಪ್ಪದೇ ಮತದಾನ ಮಾಡಿ, ನಮ್ಮ ಮತ ನಮ್ಮ ಹಕ್ಕು ಎಂದು ಗ್ರಾಮದ ಮತದಾರರು ಘೋಷಣೆ ಕೂಗುತ್ತಾ ಬೇವೂರ ಗ್ರಾಮದ ಪ್ರತಿಯೊಂದ ವಾರ್ಡ್ನಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸ್ವಚ್ಚವಾಹಿನಿ ಮೈಕ್‌ನಲ್ಲಿ ಚುನಾವಣೆ ಜಾಗೃತಿ ಗೀತೆಗಳನ್ನು ಹಾಕಿಕೊಂಡು ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಿದರು.

ಯಲಬುಗಾ ತಾಲೂಕಿನ ಬೇವೂರ ಗ್ರಾಮದಲ್ಲಿ ಏಪ್ರೀಲ್ 30ರಂದು ನಡೆದ ನಮ್ಮ ನಡೆ ಮತದಾನದ ಕಡೆ ವಿಶೇಷ ಕಾರ್ಯಕ್ರಮಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಸಂತೋಷ ಪಾಟೀಲ್ ಬಿರಾದಾರ್ ಚಾಲನೆ ನೀಡಿದರು. ಬೇವೂರ ಗ್ರಾಮದ ಮಹಿಳೆಯರಿಗಾಗಿ ವಿಶೇಷವಾಗಿ ಸ್ಥಾಪಿಸಿರುವ ಸಖಿ ಪಿಂಕ್ ಮತಗಟ್ಟೆ ಎದುರು ಮಹಿಳೆಯರು ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಪೋಟೊ ಕ್ಲಿಕ್ಕಿಸಿಕೊಂಡು ಗಮನ ಸೆಳೆದರು.

ಈ ನಿಮಿತ್ತ ಗ್ರಾಮೀಣ ಪ್ರದೇಶಗಳಲ್ಲಿನ ಮತಗಟ್ಟೆಗಳನ್ನು ತಳಿರು ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮಕ್ಕೆ ತೆರಳಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link