15 ವರ್ಷಕ್ಕೆ ದೊಡ್ಡ ತಾರೆ, 8 ಫಿಲಂಫೇರ್ ಪ್ರಶಸ್ತಿ, ಗಂಡನ ಅಫೇರ್ ನೋವು!! ಊಟಕ್ಕೆ ಕರೆದು ವಾರ್ನ್ ಮಾಡಿದ್ದ ಈ ನಟಿ ಇಂದು 1579 ಕೋಟಿ ಆಸ್ತಿ ಒಡತಿ!
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಮದುವೆಯಾಗಿ ಸುಮಾರು 50 ವರ್ಷಗಳು ಕಳೆದಿವೆ. ಈ ಜೋಡಿ ಇಂದಿಗೂ ಸಹ ಪವರ್ ಕಪಲ್ ಆಗಿಯೇ ಮಿಂಚುತ್ತಿದ್ದಾರೆ. ಒಂದರ ನಂತರ ಒಂದರಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ, ಒಟ್ಟಿಗೆ ಕೆಲಸ ಮಾಡುವಾಗ ಪರಸ್ಪರ ಪ್ರೀತಿಸುತ್ತಿದ್ದರು.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಅಮಿತಾಭ್ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಅಮಿತಾಬ್ ಬಚ್ಚನ್ ಕಷ್ಟದ ಸಮಯದಲ್ಲಿ ಜಯಾ ಅವರನ್ನು ಬೆಂಬಲಿಸಿದ್ದರು.
ಅಮಿತಾಭ್ ಮತ್ತು ಜಯಾ 1970 ರಲ್ಲಿ ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್’ನಲ್ಲಿ ಒಬ್ಬರನ್ನೊಬ್ಬರು ಭೇಟಿಯಾದರು. ಅಮಿತಾಭ್ ಖ್ಯಾತ ಚಿತ್ರ ನಿರ್ಮಾಪಕ ಕೆ. ಅಬ್ಬಾಸ್ ಮತ್ತಿತರರ ನಟರ ತಂಡದೊಂದಿಗೆ ಆಗಮಿಸಿದ್ದರು. ಅಮಿತಾಭ್ ಅವರ ವ್ಯಕ್ತಿತ್ವ ಜಯಾ ಅವರ ಗಮನ ಸೆಳೆದರೂ ಆ ಸಂದರ್ಭದಲ್ಲಿ ಏನನ್ನೂ ವ್ಯಕ್ತಪಡಿಸಿರಲಿಲ್ಲ.
ಇನ್ನು ಆ ಸಮಯದಲ್ಲಿ ಅಮಿತಾಬ್ ಬಚ್ಚನ್ ಇನ್ನೂ ನಟನಾಗಲು ಹೋರಾಡು್ತಿದ್ದರು, ಆದರೆ ಜಯಾ ಅದಾಗಲೇ ಸೂಪರ್ಸ್ಟಾರ್ ಆಗಿದ್ದರು. ಇನ್ನೊಂದೆಡೆ ಜಯಾ ಮೊದಲ ನೋಟದಲ್ಲೇ ಅಮಿತಾಭ್ ಅವರನ್ನು ಪ್ರೀತಿಸಲು ಶುರು ಮಾಡಿದ್ದರು. ನಂತರ ಅಮಿತಾಬ್ ಬಚ್ಚನ್ ಮತ್ತು ಜಯಾ ಇಬ್ಬರೂ ಗುಡ್ಡಿ ಎಂಬ ಚಿತ್ರದಲ್ಲಿ ಕೆಲಸ ಮಾಡಿದ್ದರು. ಇಲ್ಲಿಂದಲೇ ಇವರಿಬ್ಬರರ ಪ್ರೇಮ ಶುರುವಾಯಿತು.
ಇನ್ನು ಜಂಜೀರ್ ಚಿತ್ರದ ಯಶಸ್ಸಿನ ನಂತರ, ಅವರ ಸ್ನೇಹಿತರೆಲ್ಲರೂ ಲಂಡನ್’ಗೆ ಹೋಗಲು ತಯಾರಿ ನಡೆಸಿದ್ದರು. ಆದರೆ ಆ ತಂಡದಲ್ಲಿ ಜಯಾ ಕೂಡ ಇದ್ದಾರೆ ಎಂದು ಅಮಿತಾಬ್ ತಂದೆ ಹರಿವಂಶರಾಯ್ ಬಚ್ಚನ್’ಗೆ ತಿಳಿದಾಗ, “ಜಯಾ ಮತ್ತು ಅಮಿತಾಬ್ ಒಟ್ಟಿಗೆ ಲಂಡನ್’ಗೆ ಹೋಗಬೇಕಾದರೆ, ಇಬ್ಬರೂ ಮೊದಲು ಮದುವೆಯಾಗಬೇಕು” ಎಂದು ಷರತ್ತು ಹಾಕಿದರು. ಇದೇ ಕಾರಣದಿಂದ ಇವರಿಬ್ಬರು ಸಹ ಹಠಾತ್ ಮದುವೆಯಾದರು.
ಇನ್ನೊಂದೆಡೆ ಮದುವೆಯಾದ ಕೆಲ ವರ್ಷಗಳ ಬಳಿಕ ಅಮಿತಾಬ್ ಮತ್ತು ರೇಖಾ ಲವ್ ಸ್ಟೋರಿ ಬಗ್ಗೆ ಸಾಕಷ್ಟು ಚರ್ಚೆಯಾದವು. ಇವರಿಬ್ಬರ ನಡುವಿನ ಪ್ರೇಮ ಸಂಬಂಧದ ಸುದ್ದಿ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಹರಿದಾಡಿದವು.
ಅಂದಹಾಗೆ ಅಮಿತಾಭ್ ರೇಖಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇವರಿಬ್ಬರ ಜೋಡಿ ತೆರೆ ಮೇಲೆ ಹಿಟ್ ಆಗಿತ್ತು. ಆದರೆ ಇವರಿಬ್ಬರ ಅಫೇರ್ ಸುದ್ದಿ ಜಯಾ ಬಚ್ಚನ್ ಕಿವಿಗೆ ಬಿದ್ದ ತಕ್ಷಣ ಜಯಾಗೆ ಸಿಡಿಲು ಬಡಿದಂತಾಗಿತ್ತು. ಒಮ್ಮೆ ಅಮಿತಾಭ್ ಬಚ್ಚನ್ ಮನೆಯಲ್ಲಿ ಇಲ್ಲದಿದ್ದಾಗ ಒಂದು ರಾತ್ರಿ ರೇಖಾಳನ್ನು ಜಯಾ ತನ್ನ ಮನೆಗೆ ಊಟಕ್ಕೆ ಕರೆದಿದ್ದರು. ರೇಖಾ ಜಯಾ ಅವರ ಮನೆಗೆ ಬಂದಾಗ, ಬಹಳ ಗೌರವದಿಂದ ಉಪಚರಿಸಿದರು. ವಿವಿಧ ಖಾದ್ಯಗಳನ್ನು ಬಡಿಸಿದರು. ಊಟ ಮಾಡಿ ರೇಖಾ ವಾಪಸ್ ಹೋಗುತ್ತಿದ್ದಾಗ ಜಯಾ ‘ಅಮಿತ್‌ನನ್ನು ನಾನು ಎಂದಿಗೂ ಬಿಡುವುದಿಲ್ಲ’ ಎಂದು ಹೇಳಿದರು. ಜಯಾ ಅವರ ಈ ಹೇಳಿಕೆ ರೇಖಾ ಎಂದಿಗೂ ಅಮಿತಾಬ್ ಅವರಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅದಾದ ನಂತರ ಅವಮಾನದಿಂದ ನೊಂದ ರೇಖಾ ಮತ್ತೆಂದೂ ಅಮಿತಾಬ್ ಜೊತೆ ಸ್ನೇಹ ಸಲುಗೆಯನ್ನು ಇಟ್ಟುಕೊಂಡಿರಲಿಲ್ಲ.
ಇನ್ನು ಜಯಾ ಬಚ್ಚನ್ ತನ್ನ 15ನೇ ವಯಸ್ಸಿಗೆ ಸ್ಟಾರ್ ಗಿರಿಯನ್ನೇ ಹೊತ್ತ ನಟಿ. 8 ಫಿಲಂಫೇರ್ ಪ್ರಶಸ್ತಿ ಗೆದ್ದ ಈಕೆ ಪ್ರಸ್ತುತ ಬರೋಬ್ಬರಿ 1579 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.