ಧಾರಾವಾಹಿಯಲ್ಲಿ ಅತ್ತಿಗೆ ಮೈದುನ, ಆದರೆ ನಿಜ ಜೀವನದಲ್ಲಿ ಪತಿ ಪತ್ನಿ ಈ ಜೋಡಿ..!
ಗುಮ್ ಹೈ ಕಿಸಿಕೇ ಪ್ಯಾರ್ ಮೇ ಧಾರಾವಾಹಿಯಲ್ಲಿ, ವಿರಾಟ್ ತನ್ನ ಹೆಂಡತಿ ಸಾಯಿಯನ್ನು ಗಾಢವಾಗಿ ಪ್ರೀತಿಸುತ್ತಾನೆ. ಆದರೆ ನಿಜ ಜೀವನದಲ್ಲಿ ಅವರು ಪಾಖಿ ಅಂದರೆ ಐಶ್ವರ್ಯಾ ಶರ್ಮಾಳ ಪ್ರೀತಿ. ಇನ್ನೇನು ಕೆಲವೇ ದಿನಗಳಲ್ಲಿ ಇಬ್ಬರು ಸತಿ ಪತಿಗಳಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿರಾಟ್ ಅಂದರೆ ನೀಲ್ ಭಟ್ ಮತ್ತು ಪಾಖಿ ಅಂದರೆ ಐಶ್ವರ್ಯ ಶರ್ಮಾ ಈ ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನೀಲ್ ಭಟ್ ಮತ್ತು ಐಶ್ವರ್ಯಾ ಶರ್ಮಾ ಮದುವೆ ಉಜ್ಜಯಿನಿಯಲ್ಲಿ ನೆರವೇರಲಿದೆ. ವರದಿಯ ಪ್ರಕಾರ, ಮದುವೆಯ ನಂತರ, ನೀಲ್ ಮತ್ತು ಐಶ್ವರ್ಯಾ ಮುಂಬೈನಲ್ಲಿ ಸ್ನೇಹಿತರಿಗಾಗಿ ಆರತಕ್ಷತೆ ಪಾರ್ಟಿಯನ್ನು ನಡೆಸಲಿದ್ದಾರೆ.
ನೀಲ್ ಭಟ್ ಮತ್ತು ಐಶ್ವರ್ಯ ಶರ್ಮಾ ಜೀವನದ ಹೊಸ ಹಂತಕ್ಕೆ ಕಾಲಿಡಲಿದ್ದಾರೆ. ರೀಲ್ ಲೈಫ್ ನಲ್ಲಿ ಪ್ರೇಕ್ಷಕರ ಮನಗೆದ್ದಿರುವ ಪಾಖಿ ಮತ್ತು ವಿರಾಟ್ ನವೆಂಬರ್ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕೆಲ ಸಮಯದ ಹಿಂದೆ ಪಾಖಿ ಪಾತ್ರದಲ್ಲಿ ನಟಿಸಿದ್ದ ಐಶ್ವರ್ಯಾ ಶರ್ಮಾ ತನ್ನ ಕೈಯ ಮೇಲೆ ನೀಲ್ ಹೆಸರಿನ ಸುಂದರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನೀಲ್ ಭಟ್ ಅವರ ಜನ್ಮದಿನದಂದು ಅವರು ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ.