ಪಾಕ್ ನಾಯಕ ಬಾಬರ್’ಗೆ ಭಾರತದ ಈ ಕ್ರಿಕೆಟಿಗನಂದ್ರೆ ಪಂಚಪ್ರಾಣ: ನೆಚ್ಚಿನ ಕ್ರಿಕೆಟಿಗನ ಪತ್ನಿಯನ್ನೇ ಹೋಲುವ ಯುವತಿ ಜೊತೆ ಡೇಟ್ ಕೂಡ ಮಾಡಿದ್ರಂತೆ!

Sun, 09 Jun 2024-2:45 pm,

ಜೂನ್ 9 ಅಂದರೆ ಇಂದು ಟಿ20 ವಿಶ್ವಕಪ್‌’ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಮಹತ್ವದ ದಾಖಲೆಗಳನ್ನು ಸೃಷ್ಟಿಸುವತ್ತ ಕಣ್ಣಿಟ್ಟಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ಪಾಕ್ ನಾಯಕ ಬಾಬರ್ ಅಜಂ ನೆಚ್ಚಿನ ಕ್ರಿಕೆಟಿಗ ಬಗ್ಗೆ ಮಾಹಿತಿ ನೀಡಲಿದ್ದೇವೆ.

“ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ವಿಶ್ವದ ನನ್ನ ನೆಚ್ಚಿನ ಬ್ಯಾಟರ್‌’ಗಳು. ಇವರೆಲ್ಲಾ ವಿಶ್ವದ ಅಗ್ರಗಣ್ಯ ಆಟಗಾರರು. ಪರಿಸ್ಥಿತಿಗಳನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ. ಅದಕ್ಕಾಗಿಯೇ ನನಗೆ ಅವರೆಂದರೆ ಇಷ್ಟ” ಎಂದು ಬಾಬರ್ ಅಜಂ ಸ್ಟಾರ್ ಸ್ಪೋರ್ಟ್ಸ್‌’ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಕೆಲವೊಂದು ವರದಿಗಳ ಪ್ರಕಾರ, ವಿರಾಟ್ ಪತ್ನಿ ಅನುಷ್ಕಾ ಶರ್ಮಾರನ್ನೇ ಹೋಲುವ ಪಾಕ್ ಮಾಡೆಲ್ ಕಂ ನಟಿ ಹನಿಯಾ ಅಮೀರ್ ಎಂಬಾಕೆಯ ಜೊತೆ ಬಾಬರ್ ಡೇಟಿಂಗ್ ಮಾಡುತ್ತಿದ್ದರು.

ಪಾಕಿಸ್ತಾನದ ಅನೇಕ ಅಭಿಮಾನಿಗಳು ಹನಿಯಾಳನ್ನು ಪಾಕಿಸ್ತಾನದ ‘ಅನುಷ್ಕಾ ಶರ್ಮಾ’ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲದೆ ಬಾಬರ್ ಅಜಂ, ಜೂನಿಯರ್ ಅನುಷ್ಕಾ ಜೊತೆ ಡೇಟ್ ಮಾಡುತ್ತಿದ್ದಾನೆ ಎಂದೆಲ್ಲಾ ವದಂತಿ ಎಬ್ಬಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link