ಐಶ್ವರ್ಯ ರೈ ಜೆರಾಕ್ಸ್ ಕಾಪಿಯಂತೆ ಕಾಣುವ ಈ ಬ್ಯೂಟಿ ಯಾರು ಗೊತ್ತೇ? ಈಕೆ ಜನಪ್ರಿಯ ಉದ್ಯಮಿ, ಬಡಜನರಿಗೆ ಸಹಾಯ ಮಾಡುತ್ತಿರುವ ಸಮಾಜ ಸೇವಕಿ!!
ಮಿಸ್ ವರ್ಲ್ಡ್ ಸ್ಪರ್ಧೆಗಳಲ್ಲಿ ಭಾರತದಿಂದ ಅನೇಕರು ಭಾಗವಹಿಸಿ ಗೆದ್ದಿದ್ದರೂ ಮಿಸ್ ವರ್ಲ್ಡ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಐಶ್ವರ್ಯಾ ರೈ. ಅಂತಹ ಜನಪ್ರಿಯ ನಟಿಯಾಗಿರುವ ಐಶ್ವರ್ಯಾ ರೈ, ನಟ ಅಮಿತಾಬ್ ಬಚ್ಚನ್ ಅವರ ಏಕೈಕ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ತಮ್ಮ ನಟನಾ ವೃತ್ತಿಯನ್ನು ಕಡಿಮೆ ಮಾಡಿದ್ದಾರೆ. ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ.
ಐಶ್ವರ್ಯಾ ರೈ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ಇಷ್ಟಪಡುತ್ತಾರೆ. ಒರಿಜಿನಲ್ ಐಶ್ವರ್ಯಾ ರೈ ಅವರಂತೆಯೇ ಕಾಣುವ ಪಾಕಿಸ್ತಾನಿ ಉದ್ಯಮಿ ಕನ್ವಾಲ್ ಸೀಮಾ ಅವರ ಫೋಟೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.
ಕನ್ವಾಲ್ ಸೀಮಾ ಅವರು ಐಶ್ವರ್ಯಾ ರೈ ಅವರಂತೆಯೇ ಚೂಪಾದ ಮೂಗು ಮತ್ತು ಸುಂದರವಾದ ಕಣ್ಣುಗಳನ್ನು ಹೊಂದಿರುವುದರಿಂದ ಸೇಮ್ ಟು ಸೇಮ್ ನೋಡಲು ಐಶ್ವರ್ಯಾ ರೈಯಂತೆ ಕಾಣುತ್ತಾರೆ.
ಕನ್ವಾಲ್ ಸೀಮಾ ಅವರ ಫೋಟೋವನ್ನು ಐಶ್ವರ್ಯಾ ರೈ ಅವರ ಫೋಟೋದೊಂದಿಗೆ ಹೋಲಿಕೆ ಮಾಡಲಾಗುತ್ತಿದ್ದು, ಹಲವರು ಅದನ್ನು ಅಚ್ಚರಿಯಿಂದ ಶೇರ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕನ್ವಾಲ್ ಸೀಮಾ ಐಶ್ವರ್ಯಾ ರೈಗಿಂತ ಸುಂದರಿ ಎಂದಿದ್ದಾರೆ.
ಈ ಹಿಂದೆ ‘ಸುಹಾನಿ ಅಹುಜಾ’ ವೆಬ್ ಸೀರೀಸ್ ನಲ್ಲಿ ನಟಿಸಿದ್ದ ಅಂಜಲಿ ಶಿವರಾಮನ್ ಐಶ್ವರ್ಯಾ ರೈ ಅವರನ್ನು ಹೋಲುವಂತಿದ್ದಾರೆ ಎಂದು ಫೇಮಸ್ ಆಗಿದ್ದು, ಇದೀಗ ನೆಟಿಜನ್ ಗಳು ಕನ್ವಾಲ್ ಸೀಮಾ ಅವರನ್ನು ಫೇಮಸ್ ಮಾಡುತ್ತಿದ್ದಾರೆ. ಆದರೆ ಕನ್ವಾಲ್ ಸೀಮಾ ಅವರನ್ನು ನೆಟಿಜನ್‌ಗಳು ಐಶ್ವರ್ಯಾ ರೈ ಅವರ ಡುಪ್ಲಿಕೇಟ್ ಎಂದು ಕರೆಯುವುದನ್ನು ಇಷ್ಟಪಡುವುದಿಲ್ಲ. ಈ ವಿಷಯವನ್ನು ಅವರು ಸಂದರ್ಶನದಲ್ಲಿ ಬಹಿರಂಗವಾಗಿ ಹೇಳಿದ್ದಾರೆ.
ಕನ್ವಾಲ್ ಸೀಮಾ ಪಾಕಿಸ್ತಾನದ ಉದ್ಯಮಿ. ಅವರು 'ಮೈ ಇಂಪ್ಯಾಕ್ಟ್ ಮೀಟರ್' ಎಂಬ ಡಿಜಿಟಲ್ ಕಂಪನಿಯನ್ನು ನಡೆಸುತ್ತಿದ್ದಾರೆ. ಸೀಮಾ ಅವರ ಸಂಸ್ಥೆ ಬಡತನದಿಂದ ಬಳಲುತ್ತಿರುವ ಜನರ ಬಗ್ಗೆ ಮಾತನಾಡಲು ವೇದಿಕೆಯಾಗಿದೆ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ಸಹಾಯವನ್ನೂ ನೀಡುತ್ತದೆ.
ಕನ್ವಾಲ್ ಸೀಮಾ ತನ್ನ ಶಾಲಾ ಶಿಕ್ಷಣವನ್ನು ಪಾಕಿಸ್ತಾನದಲ್ಲಿ ಮಾತ್ರ ಮಾಡಿದರು. ಅದರ ನಂತರ, ಅವರು ಅಮೇರಿಕಾ ಮತ್ತು ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡಿದರು, ಅವರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು 200 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಲ್ಲಿ ಉನ್ನತ ಕೆಲಸವನ್ನು ತಿರಸ್ಕರಿಸಿದರು ಮತ್ತು ಈಗ ಅವರು ಪಾಕಿಸ್ತಾನದಲ್ಲಿ ತಮ್ಮ ಸ್ಟಾರ್ಟ್ ಅಪ್ ಕಂಪನಿಯನ್ನು ನಿರ್ವಹಿಸುತ್ತಿದ್ದಾರೆ.