ಶಾಹಿದ್ ಅಫ್ರಿದಿ ಜೊತೆ ಬಾಲಿವುಡ್‌ ಸ್ಟಾರ್‌ ನಟಿಯ ಸಂಬಂಧದ ಸೀಕ್ರೆಟ್‌ ರೀವಿಲ್‌.! ಏನಿದು ಗುಟ್ಟು?

Mon, 09 Dec 2024-8:38 pm,

ಕ್ರಿಕೆಟ್‌ಗೂ ಸಿನಿಮಾರಂಗಕ್ಕೂ ಮೊದಲಿನಿಂದಲೂ ಒಂದು ನಂಟಿದೆ. ಹಲವು ಖ್ಯಾತ ನಟಿಯರು ಕ್ರಿಕೆಟಿಗರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆಗಾಗ ಬಾಲಿವುಡ್‌ ಸೆಲಿಬ್ರಿಟಿಗಳು ಮತ್ತು ಕ್ರಿಕೆಟಿಗರ ಡೇಟಿಂಗ್‌ ವದಂತಿಗಳು ಸಹ ಹರಡುತ್ತಿರುತ್ತವೆ. 

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಅಂದಿನ ಸ್ಟಾರ್ ನಾಯಕಿ ಸೋನಾಲಿ ಬೇಂದ್ರೆ ಈ ಹಿಂದೆ ಸಂಬಂಧ ಹೊಂದಿದ್ದರು ಎಂಬ ಬಹುದೊಡ್ಡ ವದಂತಿ ಆ ಕಾಲದಲ್ಲಿತ್ತು. ಇತ್ತೀಚೆಗಷ್ಟೇ ಅಫ್ರಿದಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶಾಹಿದ್ ಅಫ್ರಿದಿ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದರು. ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಶಾಹಿದ್ ಅಫ್ರಿದಿ ಭಾರತೀಯ ನಟಿ ಸೋನಾಲಿ ಬೇಂದ್ರೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಅಫ್ರಿದಿ ಈಗ ಮೌನ ಮುರಿದಿದ್ದಾರೆ.

ಪಾಕಿಸ್ತಾನ್ ಟ್ರಿಬ್ಯೂನ್ ವೆಬ್‌ಸೈಟ್ ವರದಿ ಪ್ರಕಾರ.. 17ನೇ ಉರ್ದು ಅಂತರಾಷ್ಟ್ರೀಯ ಸಮ್ಮೇಳನ, ಕರಾಚಿ ಉತ್ಸವದಲ್ಲಿ ಭಾಗವಹಿಸಿದ್ದ ಆಫ್ರಿದಿ ಅವರನ್ನು ಈ ಬಗ್ಗೆ ಕೇಳಲಾಯಿತು. ಈಗ ನಾನು ಅಜ್ಜನಾಗಿದ್ದೇನೆ ಎಂದು ಹೇಳಿದ್ದಾರೆ. 

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅಫ್ರಿದಿ.. ನನಗೆ ಇನ್ನೂ ವಯಸ್ಸಾಗಿದೆ ಎಂದು ಅನ್ನಿಸಿಲ್ಲ.. ನನ್ನ ಐದನೇ ಮಗಳ ಮೂಲಕ ಮೊಮ್ಮಗ ಹುಟ್ಟಿದಾಗ ತಾತನಂತೆ ಅನಿಸುತ್ತದೆ ಎಂದಿದ್ದಾರೆ. 

ಹಿಂದಿ ಚಿತ್ರಗಳ ಮೂಲಕ ಜನಮನ್ನಣೆ ಗಳಿಸಿದ್ದ ಸೋನಾಲಿ ಬೇಂದ್ರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಅಫ್ರಿದಿ ಮತ್ತು ಶೋಯೆಬ್ ಅಖ್ತರ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿತ್ತು.

ಆದರೆ ಪಾಕಿಸ್ತಾನಿ ಕ್ರಿಕೆಟಿಗರಿಬ್ಬರೂ ಈ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಇವೆಲ್ಲವೂ ಕೆಟ್ಟ ಊಹಾಪೋಹಗಳು ಎಂದು ಅಫ್ರಿದಿ ಇತ್ತೀಚೆಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 

ಸೋನಾಲಿ ಬೇಂದ್ರೆ ಅವರು ಚಲನಚಿತ್ರ ನಿರ್ಮಾಪಕ ಗೋಲ್ಡಿ ಬೆಹ್ಲ್ ಅವರನ್ನು ವಿವಾಹವಾದರು. ಅವರಿಗೆ ರಣವೀರ್ ಬೆಹ್ಲ್ ಎಂಬ ಮಗನಿದ್ದಾನೆ. ಸೋನಾಲಿ ಬೇಂದ್ರೆ ಇತ್ತೀಚೆಗಷ್ಟೇ ಕ್ಯಾನ್ಸರ್‌ ಗೆದ್ದು ಬಂದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link