3ನೇ ಮದುವೆಯಾದ ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್..! ಫೋಟೋಸ್ ಇಲ್ಲಿವೆ
ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಶಾನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.
ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ನಟಿ ಶಾನಾ ಪಾಕಿಸ್ತಾನಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಶೋಯೆಬ್ ಮೂರನೇ ಪತ್ನಿಯಾಗಿ ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ಶಾನ್‌ಗೆ ಇದು ಎರಡನೇ ಮದುವೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ವಿಚ್ಛೇದನದ ವದಂತಿಗಳ ನಡುವೆ ಶೋಯೆಬ್ ಮಲಿಕ್ ತಮ್ಮ ಮೂರನೇ ಮದುವೆಯ ಬಗ್ಗೆ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಶಾನಾ ಈ ಹಿಂದೆ ಪಾಕಿಸ್ತಾನಿ ನಟನನ್ನು ಮದುವೆಯಾಗಿದ್ದರು. ಇಬ್ಬರೂ 2020 ರಲ್ಲಿ ವಿವಾಹವಾದರು ಮತ್ತು 2023 ರಲ್ಲಿ ಬೇರ್ಪಟ್ಟರು. ಪ್ರಸ್ತುತ ಅವರು ಶೋಯೆಬ್ ಮಲಿಕ್ ವರಿಸಿದ್ದಾರೆ.
ಸಧ್ಯ ಶೋಯೆಬ್ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾನಿಯಾ ಅಭಿಮಾನಿಗಳು ಶೋಯೆಬ್ ಮದುವೆ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಅಲ್ಲದೆ, ಟ್ರೋಲ್ ಸಹ ಮಾಡಲಾಗುತ್ತಿದೆ.
ಇನ್ನು ಶೋಯೆಬ್ ಮಲ್ಲಿ ಮದುವೆಯಾಗಿರುವ ನಟಿ ಶಾನಾ ಯಾರು..? ಅವರ ಮೊದಲ ಪತಿಯಾರು ಅಂತ ನೆಟಿಜನ್‌ಗಳು ದೊಡ್ಡ ಮಟ್ಟದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.