Palmistry: ಅಂಗೈಯಲ್ಲಿರುವ ಈ ರೇಖೆಯಿಂದ ಜೀವನವೇ ಬದಲಾಗುತ್ತದೆ, ಧನ-ಸಂಪತ್ತಿನ ಕೊರತೆ ಇರುವುದಿಲ್ಲ
1. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅದೃಷ್ಟ ರೇಖೆಯು ಅಂಗೈಯಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯದ ಬೆರಳಿನವರೆಗೆ ಹೋಗುತ್ತದೆ. ಈ ರೇಖೆಯು ಮಣಿಕಟ್ಟಿನ ಮೇಲೆ ಇರುವ ಮಣಿಬಂಧ ರೇಖೆಯಿಂದ ಪ್ರಾರಂಭವಾಗಿ ಮಧ್ಯದ ಬೆರಳಿನವರೆಗೆ ನೇರವಾಗಿ ಹೋಗುತ್ತದೆ. ಈ ಸ್ಥಳವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ.
2. ಮಣಿಬಂಧದಿಂದ ಹೊರಬರುವ ಈ ರೇಖೆಯು ಯಾರ ಅಂಗೈಯಲ್ಲಿ ನೇರವಾಗಿ ಶನಿ ಪರ್ವತಕ್ಕೆ ಹೋಗುತ್ತದೆಯೋ ಅವರನ್ನು ತುಂಬಾ ಅದೃಷ್ಟಶಾಲಿಗಳು ಪರಿಗಣಿಸಲಾಗುತ್ತದೆ. ಇಂತಹ ಜನರ ಜೀವನ ಮೊದಲು ಸಾಮಾನ್ಯವಾಗಿರುತ್ತದೆ, ಆದರೆ ಮದುವೆಯ ನಂತರ ಅವರ ಅದೃಷ್ಟವು ಭಾರಿ ಮೆರಗು ಪಡೆದುಕೊಳ್ಳುತ್ತದೆ.
3. ಈ ಸ್ಥಳದಲ್ಲಿ ಅದೃಷ್ಟ ರೇಖೆ ಇರುವುದರಿಂದ, ಮದುವೆಯ ನಂತರ ಜನರು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಅವರು ಜೀವನದಲ್ಲಿ ಏನನ್ನು ಪಡೆಯಲು ಬಯಸುತ್ತಾರೆಯೋ ಅದನ್ನು ಅವರು ಪಡೆಯುತ್ತಾರೆ.
4. ಶನಿ ಪರ್ವತವನ್ನು ತಲುಪಿದ ನಂತರ ಒಂದು ರೇಖೆಯು ವಿಭಜನೆಗೊಂಡು ಗುರು ಪರ್ವತದ ಕೆಳಗೆ ತಲುಪಿದರೆ, ಅಂದರೆ ಕಿರುಬೆರಳಿಗೆ ತಲುಪಿದರೆ, ಇಂತಹ ಜನರು ತುಂಬಾ ದಾನ ಮಾಡುತ್ತಾರೆ. ಈ ಜನರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಮುಂದೆ ಇರುತ್ತಾರೆ.
5. ಅದೃಷ್ಟದ ರೇಖೆಯ ಕೊನೆಯ ಭಾಗವು ಮೇಲಕ್ಕೆ ಎದ್ದಿರುವಂತೆ ಇದ್ದರೆ, ಇಂತಹ ಜನರು ಜೀವನದಲ್ಲಿ ತುಂಬಾ ಸಂತೋಷವಾಗಿರುತ್ತಾರೆ. ಇತರ ಜನರು ಸಹ ಈ ಜನರ ಕಡೆಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)