Palmistry: ಮಹಿಳೆಯರ ಕೈಗಳಲ್ಲಿನ ಈ ಚಿಹ್ನೆಗಳು ಶುಭ ಸಂಕೇತಗಳನ್ನು ಸೂಚಿಸುತ್ತವೆ
1. ದೊಡ್ಡ ಅಧಿಕಾರಿಯ ಜೊತೆಗೆ ವಿವಾಹ ಯೋಗ - ಯಾವ ಮಹಿಳೆ ಅಥವಾ ಯುವತಿಯ ಕೈಗಳಲ್ಲಿ ಧ್ವಜ ಹಾಗೂ ರಥದ ಚಿಹ್ನೆ ಇರುತ್ತದೆಯೋ ಅವರ ವಿವಾಹ ದೊಡ್ಡ ಅಧಿಕಾರಿಯ ಜೊತೆ ನಡೆಯುತ್ತದೆ ಅಥವಾ ವಿವಾಹದ ಬಳಿಕ ಅವರ ಪತಿ ಉನ್ನತ ಹುದ್ದೆ ಅಲಂಕರಿಸುತ್ತಾರೆ.
2. ಇವರ ಪತಿ ದೊಡ್ಡ ಉದ್ಯಮಿಯಾಗಿರುತ್ತಾರೆ - ಬಲ ಅಂಗೈಯಲ್ಲಿ ತಕ್ಕಡಿಯ ಗುರುತು ಅಥವಾ ಆಕಾರ ಇದ್ದರೆ, ಅಂತಹ ಮಹಿಳೆಯರ ಪತಿ ದೊಡ್ಡ ಉದ್ಯಮಿ ಇರುತ್ತಾರೆ. ಎಡ ಅಂಗೈಯಲ್ಲಿ ಆನೆ ಅಥವಾ ನಂದಿಯ ಗುರುತು ಇರುವುದು ಕೂಡ ಇದೇ ರೀತಿಯ ಯೋಗವನ್ನು ಹೊಂದಿರುತ್ತಾರೆ.
3. ಸಂತಾನಕ್ಕೆ ಉನ್ನದ ಹುದ್ದೆಯ ಯೋಗ - ಯಾವ ಮಹಿಳೆಯರ ಕೈಯಲ್ಲಿ ಶಂಖ ಹಾಗೂ ಚಕ್ರದ ಚಿಹ್ನೆಗಳಿರುತ್ತವೆಯೋ ಅವರು ಸಂತಾನದ (ಪುತ್ರ /ಪುತ್ರಿ) ವಿಷಯದಲ್ಲಿ ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ. ಅವರ ಪುತ್ರ ಅಥವಾ ಪುತ್ರಿ ಉನ್ನತ ಹುದ್ದೆ ಅಲಂಕರಿಸುವುದರ ಜೊತೆಗೆ ತುಂಬಾ ವೈಭವೋಪೇತ ಜೀವನ ಕಳೆಯುತ್ತಾರೆ.
4. ಈ ಮಹಿಳೆಯರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಪ್ರಾಪ್ತಿಯಾಗುತ್ತದೆ - ಅಂಗೈಯಲ್ಲಿ ಕಮಲದ ಚಿಹ್ನೆಯನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರ ಅಂಗೈಯಲ್ಲಿ ಕಮಲ ಅಥವಾ ಮೀನಿನಂತಹ ಆಕೃತಿ ಇದ್ದರೆ, ಅವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಲಭಿಸುತ್ತದೆ.
5. ಈ ಮಹಿಳೆಯರ ಮನೆಯಲ್ಲಿ ಧನವೃಷ್ಟಿ - ಮಹಿಳೆಯರ ಅಂಗೈ ಗುಲಾಬಿಯಾಗಿರುವುದರ ಜೊತೆಗೆ ಅವರ ಕೈಯಲ್ಲಿ ಸ್ವಸ್ತಿಕ ಚಿಹ್ನೆ ನಿರ್ಮಾಣಗೊಂಡಿದ್ದರೆ, ಅವರ ಮನೆಯಲ್ಲಿ ಧನವೃಷ್ಟಿಯಾಗುತ್ತದೆ. ಇದಲ್ಲದೆ ಅವರು ವರಿಸಿ ಹೋಗುವ ಮನೆಯಲ್ಲಿಯೂ ಕೂಡ ಹಣಕಾಸಿನ ಮುಗ್ಗಟ್ಟು ಎಂದಿಗೂ ಎದುರಾಗುವುದಿಲ್ಲ .