ಮಧುಮೇಹಕ್ಕೆ ಈ ʼಎಲೆʼ ರಾಮರಕ್ಷೆಯಿದ್ದಂತೆ: ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ 10 ನಿಮಿಷ ಮೊದಲು ಕುಡಿದರೆ 30 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್‌ ಆಗೇ ಉಳಿಯುತ್ತದೆ

Tue, 08 Oct 2024-8:14 pm,

ಪಂಡನ್‌ ಎಲೆ ಎಂದರೆ ಕೆಲವರಿಗಷ್ಟೇ ಅರ್ಥವಾಗಬಹುದು. ಇದನ್ನು ಭಾರತದಲ್ಲಿ ಬಿರಿಯಾನಿ ಎಲೆ, ಬಾಸ್ಮತಿ ಎಲೆ ಅಥವಾ ಅನ್ನಪೂರ್ಣ ಎಲೆ ಎಂದೂ ಸಹ ಕರೆಯುತ್ತಾರೆ.

 

ಈ ಎಲೆಗಳನ್ನು ಮಲೇಷ್ಯಾ, ಥೈಲ್ಯಾಂಡ್ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಆಹಾರಕ್ಕಾಗಿ ವಿಶೇಷ ಅಭಿರುಚಿ ಒದಗಿಸಲು ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಪಾರ ಔಷಧೀಯ ಗುಣಲಕ್ಷಣಗಳಿದ್ದು ಆರೋಗ್ಯ ಮತ್ತು ಸೌಂದರ್ಯಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

 

ಅನ್ನಪೂರ್ಣ ಎಲೆ ಉತ್ತಮವಾದ ಬಣ್ಣ ಮತ್ತು ರುಚಿಯನ್ನು ಹೊಂದಿರುತ್ತವೆ. ಅಡುಗೆಗೆ ವಿಶೇಷವಾದ ರುಚಿ ಮತ್ತು ಪರಿಮಳವನ್ನು ಒದಗಿಸಲು ಈ ಎಲೆಗಳನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಇನ್ನು ಭಾರತದ ಭಕ್ಷ್ಯಗಳಲ್ಲಿಯೂ ಈ ಎಲೆಗಳನ್ನು ಬಳಸಲಾಗುತ್ತದೆ.

 

ಈ ಎಲೆಗಳು ಸಾಕಷ್ಟು ಆಂಟಿಫಂಗಲ್ ಮತ್ತು ಸೋಂಕನ್ನು ವಿರೋಧಿಸುತ್ತವೆ. ಈ ಎಲೆಗಳಲ್ಲಿರುವ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ.

 

ಸುಟ್ಟಗಾಯಗಳು, ಬೆವರು ಗುಳ್ಳೆಗಳು ಮತ್ತು ತುರಿಕೆ ಮುಂತಾದ ಚರ್ಮದ ಸಮಸ್ಯೆಗಳಿಗೆ ಸಹ ಪಂಡನ್ ಎಲೆಗಳಿಗೆ ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತವೆ.

 

ಪೋಸ್ಟ್ -ಚೈಲ್ಡ್ ಬರ್ತ್‌ನ ಸಮಸ್ಯೆಗಳನ್ನು ಕಡಿಮೆ ಮಾಡಲು ಮಗುವಿಗೆ ಬೇಯಿಸಿದ ಪದಾರ್ಥಗಳಲ್ಲಿ ಇದನ್ನು ಸ್ವಲ್ಪ ಸೇರಿಸುವುದು ಸೂಕ್ತ. ಅಲ್ಲದೆ, ಮಹಿಳೆಯರು ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ನೋವನ್ನು ಕಡಿಮೆ ಮಾಡಬಹುದು. ಈ ಎಲೆಗಳು ಸಂಧಿವಾತ ಮತ್ತು ತಲೆನೋವಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

 

ಈ ಎಲೆಗಳು ಸೋಂಕು ನಿವಾರಕವಾಗಿ ಸಹ ಕೆಲಸ ಮಾಡುತ್ತದೆ. ಇದರ ನೀರನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಜಿರಳೆಗಳು, ಸೊಳ್ಳೆಗಳು ಮತ್ತು ನೊಣಗಳಂತಹ ಹಾನಿಕಾರಕ ಕೀಟಗಳು ಬರುವುದಿಲ್ಲ.

 

ಒಂದು ಲೋಟ ನೀರು ಮತ್ತು ಚಿಟಿಕೆಯಷ್ಟು ಉಪ್ಪು ಮಿಶ್ರಣ ಮಾಡಿದ ನೀರಿನಲ್ಲಿ ಅನ್ನಪೂರ್ಣ ಎಲೆಗಳನ್ನು ನೆನೆಸಿಟ್ಟು ಬೆಳಗ್ಗೆ ಕುಡಿದರೆ ಮಲಬದ್ಧತೆ, ಅಧಿಕ ರಕ್ತದೊತ್ತಡ, ಮಧುಮೇಹ, ನಿದ್ರಾಹೀನತೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ಸಹಕಾರಿ.

 

 ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link